ಮಡಿಕೇರಿ, ಮೇ ೨೦: ಮಡಿಕೇರಿ ಪ್ರಾದೇಶಿಕ ಅರಣ್ಯ ವಲಯ ವತಿಯಿಂದ ೨೦೨೨-೨೩ನೇ ಸಾಲಿನಲ್ಲಿ ಬೆಳೆಯಲಾದ ಜಾತಿವಾರು ಮಹಾಗನಿ, ಧೂಪ, ಸೀಮಾರೂಭ, ನೇರಳೆ, ಸೀಬೆ, ಕಾಡುಬಾದಾಮ್, ಸಂಪಿಗೆ, ಹಲಸು, ಬಟರ್ ಫ್ರೂಟ್, ಮಾವು, ಜಮ್‌ನೇರಳೆ, ಫ್ಯಾಶನ್ ಫ್ರೂಟ್, ಬಳಂಜಿ, ನೊಗ, ತೇಗ, ರಕ್ತಚಂದನ, ಕರ್ಪಚಕ್ಕೆ, ಹೊಂಗೆ, ಅಂಟುವಾಳ, ಪಣಪ್ಪುಳಿ, ನೆಲ್ಲಿ, ಬರ್ಮಾ ಬಿದಿರಿನ ೬x೬ ಮತ್ತು ೮x೧೨ ಗಾತ್ರದ ಗಿಡಗಳು ವಿತರಣೆಗೆ ಲಭ್ಯವಿದ್ದು, ಆಸಕ್ತರು ಮಡಿಕೇರಿ ವಲಯ ನರ್ಸರಿಯಿಂದ ಅರ್ಜಿ, ಆರ್.ಟಿ.ಸಿ. ದಾಖಲಾತಿಗಳನ್ನು ನೀಡಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮಡಿಕೇರಿ ಪ್ರಾದೇಶಿಕ ವಲಯದ ದೂರವಾಣಿ ಸಂಖ್ಯೆ ೯೭೪೧೪೫೩೧೬೬, ೯೪೪೮೭೧೩೧೯೮ ಇವರನ್ನು ಸಂಪರ್ಕಿಸಬಹುದು.