ಕೂಡಿಗೆ, ಮೇ ೨೦: ಕೂಡಿಗೆ ಗ್ರಾಮ ಪಂಚಾಯಿತಿಯ ತಿಂಗಳಿಗೊಮ್ಮೆ ನಡೆಯುವ ಮಾಸಿಕ ಸಭೆಗಳು ಕಳೆದ ೬ ತಿಂಗಳುಗಳಿAದ ನಡೆಯದೆ ಇರುವ ಕಾರಣದಿಂದಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಾವುದೇ ಅಭಿವೃದ್ಧಿ ಕಾರ್ಯಗಳು, ಮತ್ತು ಗ್ರಾಮ ಪಂಚಾಯಿತಿಗೆ ಬರುವ ವರಮಾನದ ಟೆಂಡರ್ ಪ್ರಕ್ರಿಯೆಗಳು ಸಹ ನಡೆಯದೆ ಗ್ರಾಮ ಪಂಚಾಯಿತಿಯೇ ಮೂಲೆಗುಂಪಾದ ಪರಿಸ್ಥಿತಿ ಎದುರಾಗಿದೆ.

ಕಳೆದ ಆರು ತಿಂಗಳುಗಳಿAದ ಅಧ್ಯಕ್ಷೆ ಮತ್ತು ಸದಸ್ಯರುಗಳ ನಡುವೆ ಹೊಂದಾಣಿಕೆ ಇಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳು ನಡೆದರೂ ಸಹ ಅಧ್ಯಕ್ಷೆಯು ನಡೆದ ಕಾಮಗಾರಿಗಳ ಚೆಕ್‌ಗೆ ಸಹಿ ಹಾಕದೆ ಕಾಮಗಾರಿಗಳನ್ನು ನಡೆಸಿದ ಕಾರ್ಮಿಕರಿಗೆ ಹಣವನ್ನು ಸಂದಾಯ ಮಾಡದ ವಿಚಾರವಾಗಿ ಕಳೆದ ಆರು ತಿಂಗಳುಗಳಿAದ ಮಾಸಿಕ ಸಭೆಯಲ್ಲಿ ಚರ್ಚೆಗಳು ನಡೆದು ಸಭಾತ್ಯಾಗ ಸೇರಿದಂತೆ ಪ್ರತಿಭಟನೆಗಳು ನಡೆದಿವೆ. ಕಾಮಗಾರಿಯು ನಡೆದ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಅವರ ಬದಲಿಗೆ ಬಂದ ಅಭಿವೃದ್ಧಿ ಅಧಿಕಾರಿಯು ಮಾಸಿಕ ಸಭೆಯ ದಿನಾಂಕವನ್ನು ಗುರುತಿಸಿ ಸಭೆಯನ್ನು ಕರೆದರೂ ಸಹ ಅಧ್ಯಕ್ಷೆ ಗೈರುಹಾಜರಿಯಾಗುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ಗ್ರಾಮದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ.

ಮಾಸಿಕ ಸಭೆಗಳು ನಡೆಯದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂಸದ ಮತ್ತು ಕೋಳಿ ಮಾಂಸ ಮಾರಾಟ ಹರಾಜು ಪ್ರಕ್ರಿಯೆಯಾಗಲಿ ಲೈಸೆನ್ಸ್ ನವೀಕರಣವಾಗಲಿ ನಡೆಯದೆ ಗ್ರಾಮ ಪಂಚಾಯಿತಿಗೆ ಬರುವ ಆದಾಯವು ಕಡಿಮೆಯಾಗುತ್ತಿದೆ.

ಈಗಾಗಲೇ ವಿಧಾನ ಸಭಾ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿ ವರ್ಗದವರು ಮಧ್ಯ ಪ್ರವೇಶಿಸಿ ಗ್ರಾಮ ಪಂಚಾಯಿತಿ ಕಾಮಗಾರಿಗಳ ಸಮರ್ಪಕವಾದ ಪರಿಶೀಲನೆಯಾಂದಿಗೆ ವ್ಯಾಪ್ತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಮುಂದಾಗಬೇಕೆAದು ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಪಿ. ಹಮೀದ್, ಎಸ್.ಎನ್. ಅರುಣ್ ರಾವ್, ಅನಂತ, ಶಿವಕುಮಾರ ಚಂದ್ರು ಸೇರಿದಂತೆ ಅನೇಕ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ