ನಾಪೋಕ್ಲು, ಮೇ ೧೮: ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಗುರುವಾರದ ಪಂದ್ಯಗಳಲ್ಲಿ ಆಟ್ರಂಗಡ, ಮಾಳೇಟಿರ, ಚೆಕ್ಕೆರ, ಮಂಡುವAಡ ತಂಡಗಳು ಮುನ್ನಡೆ ಸಾಧಿಸಿದವು.
ಆಟ್ರಂಗಡ ತಂಡದ ವಿರುದ್ಧ ಕುಲ್ಲೇಟಿರ ತಂಡ ಐದು ವಿಕೆಟ್ ನಷ್ಟಕ್ಕೆ ೪೯ ರನ್ ಗಳಿಸಿತು. ಉತ್ತರವಾಗಿ ಆಡಿದ ಆಟ್ರಂಗಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೫೦ ರನ್ ಗಳಿಸಿ ಗೆಲುವು ಸಾಧಿಸಿತು. ಮಾಳೇಟಿರ ತಂಡದ ವಿರುದ್ಧ ಬಲ್ಲಚಂಡ ಎರಡು ವಿಕೆಟ್ ನಷ್ಟಕ್ಕೆ ೩೪ ರನ್ ಗಳಿಸಿದರೆ ಮಾಳೆಟಿರ ತಂಡ ಎರಡು ವಿಕೆಟ್ ನಷ್ಟಕ್ಕೆ ೩೫ ರನ್ ಗಳಿಸಿ ಗೆಲುವು ಸಾಧಿಸಿತು. ಕಳಕಂಡ ತಂಡದ ವಿರುದ್ಧ ಚೆಕ್ಕೆರ ಮೂರು ವಿಕೆಟ್ ನಷ್ಟಕ್ಕೆ ೮೪ ರನ್ ಗಳಿಸಿತು .ಉತ್ತರವಾಗಿ ಆಡಿದ ಕಳಕಂಡ ತಂಡ ೧೦ ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿ ಸೋಲನ್ನು ಅನುಭವಿಸಿತು. ಮಂಡುವAಡ ವಿರುದ್ಧ ನೆರವಂಡ ತಂಡ ೪ ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿತು. ಮಂಡುವAಡ ತಂಡ ಒಂದು ವಿಕೆಟ್ ನಷ್ಟಕ್ಕೆ ೪೩ ರನ್ ಗಳಿಸಿ ಗೆಲುವು ಸಾಧಿಸಿತು.
ಶುಕ್ರವಾರ ಆಟ್ರಂಗಡ ಮತ್ತು ಮಾಳೇಟಿರ ತಂಡಗಳ ನಡುವೆ ಹಾಗೂ ಚೆಕ್ಕೆರ ಮತ್ತು ಮಂಡುವAಡ ತಂಡಗಳ ನಡುವೆ ಸೆಮಿಫೈನಲ್ಸ್ ಪಂದ್ಯಗಳು ನಡೆಯಲಿದೆ.
- ದುಗ್ಗಳ ಸದಾನಂದ.