ಕರಿಕೆ, ಮೇ ೧೮: ಪ್ರತಿ ಐದು ವರ್ಷಕ್ಕೊಮ್ಮೆ ನಡೆಸುವ ಕಾಡಾನೆ ಗಣತಿ ಕಾರ್ಯವು ಜಿಲ್ಲೆಯಲ್ಲಿ ಆರಂಭಗೊAಡಿದೆ. ಕೊಡಗು ಜಿಲ್ಲೆಯ ಅರಣ್ಯ ವೃತ್ತದ ಮಡಿಕೇರಿ, ಭಾಗಮಂಡಲ, ಸಂಪಾಜೆ, ಕುಶಾಲನಗರ, ಸೋಮವಾರ ಪೇಟೆ, ಶನಿವಾರಸಂತೆ, ವೀರಾಜಪೇಟೆ, ಮಾಕುಟ್ಟ, ತಿತಿಮತಿ ಸೇರಿದಂತೆ ವಿವಿಧ ಪ್ರಾದೇಶಿಕ ಅರಣ್ಯ ವಲಯದಲ್ಲಿ, ತಲಕಾವೇರಿ, ಪುಷ್ಪ ಗಿರಿ, ಬ್ರಹ್ಮ ಗಿರಿ ವನ್ಯಜೀವಿ ಅಭಯಾರಣ್ಯ ವಲಯ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ಈ ಗಣತಿ ಕಾರ್ಯ ನಡೆಯಲಿದೆ.
ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೂರು ದಿನಗಳ ಕಾಲ ಸಮೀಕ್ಷೆ ಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು ಆನೆಗಳ ಮಾಹಿತಿಯನ್ನು ತಂತ್ರಾAಶದಲ್ಲಿ ದಾಖಲಿಸುವ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚೆಗೆ ಆನೆ ಮಾನವನ ಸಂಘರ್ಷ ಮಿತಿಮೀರುತ್ತಿದ್ದು ಈ ಗಣತಿ ಕಾರ್ಯ ನಡೆಸಿ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಸರಕಾರ, ಅರಣ್ಯ ಇಲಾಖೆ ಯಾವ ಕ್ರಮ ಅನುಸರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಗಣತಿ ಕಾರ್ಯ ಮೂರು ದಿನ ನಡೆಸುತ್ತಿದ್ದು ಮೊದಲ ದಿನ ವನ್ಯಧಾಮ ವ್ಯಾಪ್ತಿಯ ಐದು ಚದರ ಕಿಮೀ ಸುತ್ತಲೂ ಸಿಬ್ಬಂದಿಗಳೊAದಿಗೆ ಸಮೀಕ್ಷೆ ಮಾಡಿ ಮಾಹಿತಿ ಕಲೆ ಹಾಕುತಿದ್ದು, ಎರಡನೆ ದಿನ ಎರಡರಿಂದ ಮೂರು ಕಿ.ಮಿ.ದೂರ ನಡೆದು ಆನೆಗಳ ಲದ್ದಿ ಹಾಗೂ ಜಾಡಿನ ಮಾಹಿತಿ ಸಂಗ್ರಹ ಮಾಡಲಾಗುವುದು. ಮೂರನೇ ದಿನ ಅರಣ್ಯದೊಳಗಿನ ಕೆರೆ, ಇತರೆ ನೀರಿನ ಮೂಲಗಳ ಬಳಿ ತೆರಳಿ ಛಾಯಾಚಿತ್ರ ಹಾಗೂ ಇತರೆ ದಾಖಲೆಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ.
ಆನೆ ಗಣತಿ ನಡೆಸಲು ಅರಣ್ಯ ಇಲಾಖೆಯಿಂದ ಕೆಲವು ನಿಯಮಗಳಿದ್ದು ಪ್ರತಿ ಬಾರಿ ಮೇ ತಿಂಗಳಲ್ಲಿ ನಡೆಸಲು ವೈಜ್ಞಾನಿಕ ಕಾರಣವಿದೆ. ಬೇಸಿಗೆಯಲ್ಲಿ ನೀರಿನ ಮೂಲ ಬತ್ತಿ ಕಾಡಾನೆಗಳು ನೀರಿನ ಮೂಲ ಅರಸಿ ನಿರ್ದಿಷ್ಟ ಸ್ಥಳಕ್ಕೆ ತೆರಳುವುದರಿಂದ ನಿಖರವಾಗಿ ಗಣತಿ ಮಾಡಲು ಸಾಧ್ಯವಾಗುವುದರಿಂದ ಮೇ ತಿಂಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ ಎಂದರು. ಮಡಿಕೇರಿ ಉಪವಿಭಾಗದ ಭಾಗಮಂಡಲ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರವೀಂದ್ರ ತಿಳಿಸಿದ್ದಾರೆ.
- ಸುಧೀರ್ ಹೊದ್ದೆಟ್ಟಿ