ಕಿರಿಕೊಡ್ಲಿ ಮಠ ಆಂಗ್ಲ ಮಾಧ್ಯಮ ಶಾಲೆ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಎಸ್.ಎಸ್.ಎಲ್.ಸಿ. ಆಂಗ್ಲ ಮಾಧ್ಯಮ ಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ೩೪ ವಿದ್ಯಾರ್ಥಿಗಳು ಹಾಜರಾಗಿದ್ದರು.

೧೪ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೧೯ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿ ಡಿ.ಹೆಚ್. ಗಗನ್ ೬೨೫ ಅಂಕಗಳಿಗೆ ೬೧೩ ಅಂಕಗಳನ್ನು (೯೮.೦೮%), ಎಂ.ಎಲ್. ಲಾವಣ್ಯಾ ೬೦೦ ಅಂಕಗಳು (೯೬%), ಎಸ್. ಅನನ್ಯಾ ೫೮೪ ಅಂಕಗಳು (೯೩.೪೪%) ಹಾಗೂ ಡಿ.ಎಲ್. ಚಂದನಾ ೫೮೦ ಅಂಕಗಳನ್ನು (೯೨.೪೪%) ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ೩೭ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿನಿಯರಾದ ಶ್ರೀಗೌರಿ ೫೯೭ (೯೫.೫೨%) ಅಂಕಗಳು ಹಾಗೂ ಬಿಂದುಶ್ರೀ ೫೯೬ (೯೫.೩೬%) ಅಂಕಗಳನ್ನು ಗಳಿಸಿದ್ದಾರೆ.

ಸಂಪಾಜೆ ಪ್ರೌಢಶಾಲೆ

ಸಂಪಾಜೆ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಈ ಬಾರಿ ಒಟ್ಟು ೩೫ ವಿದ್ಯಾರ್ಥಿಗಳಲ್ಲಿ ೩೩ ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಫಲಿತಾಂಶ ೯೪.೨೮% ಬಂದಿದೆ. ಇವರಲ್ಲಿ ೬ ಮಂದಿ ವಿಶಿಷ್ಟ ಶ್ರೇಣಿಯಲ್ಲಿ, ೧೯ ಮಂದಿ (೧೨+೭) ಪ್ರಥಮ ಶ್ರೇಣಿಯಲ್ಲಿ ಹಾಗೂ ೧೧ ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪವಿತ್ರ ೫೬೮/೬೨೫ (೯೦.೮೮%), ಸುಶ್ಮಿತಾ ಕೆ., ೫೬೫/೬೨೫ (೯೦.೪೦%), ಸಾನಿಯಾ ಎಂ.ಕೆ. ೫೫೧/೬೨೫ (೮೮.೧೬%), ಧನ್ಯಶ್ರೀ ಎನ್.ಟಿ. ೫೨೮/೬೨೫ (೮೪.೪೮%) ಅವರುಗಳು ಪ್ರಥಮ ೩ ಸ್ಥಾನಗಳನ್ನು ಗಳಿಸಿದ್ದಾರೆ.

ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ

ಕೂಡಿಗೆ: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ. ೧೦೦ ರಷ್ಟು ಫಲಿತಾಂಶ ಬಂದಿದೆ. ಲಿಖಿತ್ ಐ.ಜಿ. ೬೦೮ (೯೭.೨೮%), ತಿಲಕ್ ಡಿ.ಸಿ. ೬೦೫ (೯೬.೮%), ವರುಣ್ ಬಿ.ಆರ್. ೬೦೫ (೯೬.೮%), ನಿತಿನ್ ಹೆಚ್.ಎಸ್. ೬೦೦ (೯೬%) ಪಡೆದು ಮೊದಲ ೩ ಸ್ಥಾನಗಳನ್ನು ಪಡೆದಿದ್ದಾರೆ.