ಸೌರಮಂಡಲದ ಗ್ರಹಗಳಲ್ಲಿಯೇ ಅತ್ಯಾಕರ್ಷಕ ಗ್ರಹ ಎನಿಸಿಕೊಂಡಿರುವ ಶನಿ ಗ್ರಹದ ನೂರಾರು ಉಪಗ್ರಹಗಳಲ್ಲಿ ಒಂದಾದ ‘ಎನ್ಕಲೇಡಸ್’ ಉಪಗ್ರಹಕ್ಕೆ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ (ಓಂSA)ಯ ಅಂಗಸAಸ್ಥೆ ಎPಐ – ‘ಜೆಟ್ ಪ್ರಪಲ್‌ಷನ್ ಲ್ಯಾಬೊರೆಟರಿ’ಯಲ್ಲಿ ತಯಾರಾದ ರೋಬಾಟಿಕ್ ಹಾವು ‘ಇಇಐS’ ಅನ್ನು ಕಳುಹಿಸಿ ಉಪ ಗ್ರಹದ ಪದರ-ಒಳಪದರಗಳನ್ನು ಅನ್ವೇಷಿಸಲು ಸಿದ್ಧತೆಗಳು ನಡೆಯುತ್ತಿವೆ.

ಶನಿಯು ಸೌರಮಂಡಲದಲ್ಲಿ ಗುರು ಗ್ರಹದ ಬಳಿಕ ಅತ್ಯಂತ ದೊಡ್ಡ ಗ್ರಹ ಎಂದೆನಿಸಿಕೊAಡಿದ್ದು, ನೂರಾರು ಉಪಗ್ರಹಗಳನ್ನು ತನ್ನ ಗುರುತ್ವಾಕರ್ಷಣೆಯ ಹಿಡಿತದಲ್ಲಿ ಇರಿಸಿಕೊಂಡಿದೆ. ಖಗೋಳಶಾಸ್ತçಜ್ಞರು ನಿರಂತರವಾಗಿ ಗ್ರಹ-ಉಪಗ್ರಹಗಳನ್ನು ಅಧ್ಯಯಿಸುತ್ತಾ ಇದ್ದು, ಇದುವರೆಗೆÀ ೧೨೪ ಉಪಗ್ರಹಗಳನ್ನು ಶನಿಯ ಸುತ್ತದ ಕಕ್ಷೆಯಲ್ಲಿ ಗುರುತಿಸಿದ್ದಾರೆ. ಇವುಗಳಲ್ಲಿ ‘ಟೈಟನ್’ ಉಪಗ್ರಹ ಅತ್ಯಂತ ದೊಡ್ಡದ್ದು. (೧೬,೧೭೮ ಕಿ.ಮೀ. ಸುತ್ತಳತೆ) ಆದರೆ ಸಾಧಾರಣ ಗಾತ್ರದ ಎನ್ಕಲೇಡಸ್‌ನಲ್ಲಿ (೧,೫೮೪ ಕಿ.ಮೀ. ಸುತ್ತಳತೆ) ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳಿಗೆ ಹೆಚ್ಚಿನ ಆಸಕ್ತಿ ಮೂಡಿದೆ. ಕಾರಣ, ಎನ್ಕಲೇಡಸ್‌ನ ಮಂಜುಗಡ್ಡೆ ಪದರದ ಕೆಳಗೆ ಜೀವರಾಶಿಗಳಿಗೆ ಪ್ರಮುಖವಾಗಿರುವ ಸಮುದ್ರವಿರುವ ಸಾಧ್ಯತೆ. ಇದರಿಂದಾಗಿ ಈ ಉಪಗ್ರಹಕ್ಕೆ ಬಾಹ್ಯಾಕಾಶ ನೌಕೆಯ ಮೂಲಕ ರೋಬಾಟ್‌ವೊಂದನ್ನು ಕಳುಹಿಸುವ ಯೋಜನೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಸಾಮಾನ್ಯವಾಗಿ ಇಂತಹ ರೋಬಾಟ್‌ಗಳು ಭೂಮಿ ಯಲ್ಲಿನ ವಾಹನಗಳ ರೀತಿಯೇ ಚಕ್ರಗಳನ್ನು ಹೊಂದಿಕೊAಡಿರುತ್ತವೆ. ಉದಾಹರಣೆಗೆ ಮಂಗಳ ಗ್ರಹದಲ್ಲಿರುವ ‘ಓಂSAಮರ‍್ಸ್ ರೋವರ್’ ಚಕ್ರವುಳ್ಳ ವಾಹನವೇ ಆಗಿದೆ. ಮಂಗಳದ ಮೇಲ್ಪದರದ ರಚನೆಗೆ ತಕ್ಕಂತೆ, ಅಲ್ಲಿನ ಬೆಟ್ಟ-ಗುಡ್ಡಗಳಲ್ಲಿ ಸುಲಭವಾಗಿ ಸಂಚರಿಸಲು ರೋವರ್ ೬ ಚಕ್ರಗಳನ್ನು ಹೊಂದಿದೆ. ಸುಲಭ ನಿಯಂತ್ರಣಕ್ಕಾಗಿ ಪ್ರತಿ ಚಕ್ರವು ತನ್ನದೆ ಆದ ಮೋಟಾರ್ ಹೊಂದಿದ್ದು, ಪ್ರತಿಯೊಂದು ಚಕ್ರಗಳೂ ಸ್ವತಂತ್ರ‍್ರವಾಗಿ ಚಲಿಸಲು ಸಾಮರ್ಥ್ಯ ಹೊಂದಿವೆ. ಇಂತಹ ರೋಬಾಟ್‌ಅನ್ನು, ಮಂಗಳ ಗ್ರಹದ ಪದರವನ್ನು ವರ್ಷಾನುಗಟ್ಟಲೆ ಅಧ್ಯಯಿಸಿ, ಅರ್ಥ ಮಾಡಿಕೊಂಡ ಬಳಿಕವಷ್ಟೇ ನಿರ್ಮಿಸಲು ಸಾಧ್ಯ.

ಅದೇ ರೀತಿ ಎನ್ಕಲೇಡಸ್ ಉಪಗ್ರಹವನ್ನು ಅನ್ವೇಷಿಸಲು ‘ಇಇಐS’ (ಇxobioಟogಥಿ ಇxಣಚಿಟಿಣ ಐiಜಿe Suಡಿveಥಿoಡಿ) ಎಂಬ ಹಾವನ್ನು ಹೋಲುವ ರೋಬಾಟ್‌ಅನ್ನು ‘ಎPಐ’ ನಲ್ಲಿ ತಯಾರಿಸಲಾಗಿದ್ದು, ಕೊನೆ ಹಂತದ ಪರೀಕ್ಷೆಯಲ್ಲಿದೆ. ಇದಕ್ಕೆ ಯಾವ ರೀತಿಯ ಚಕ್ರವೂ ಇಲ್ಲ. ಏಕೆಂದರೆ ಎನ್ಕಲೇಡಸ್ ಉಪಗ್ರಹವು ಸಾಮಾನ್ಯವಲ್ಲ. ಸಂಪೂರ್ಣ ಮಂಜುಗಡ್ಡೆಯಿAದಲೇ ಆವರಿತವಾಗಿರುವ ಈ ಉಪಗ್ರಹವು ಸೂರ್ಯನ ಕಿರಣಗಳನ್ನು ಬಾಹ್ಯಾಕಾಶಕ್ಕೆ ಪ್ರತಿಬಿಂಬಿಸುತ್ತಾ ಇಡೀ ಸೌರಮಂಡಲದಲ್ಲೆ ಅತ್ಯಂತ ಪ್ರತಿಬಿಂಬಿತ ಪದಾರ್ಥ ಎಂದೇ ಹೆಸರು ಪಡೆದಿದೆ. ಉಪಗ್ರಹದ ಮೇಲ್ಪದರವು ಮಂಜಗಡ್ಡೆಯಿAದಲೇ ಸೃಷ್ಟಿಯಾಗಿದೆ. ಪದರದಲ್ಲಿ ಸಹಸ್ರಾರು ದ್ವಾರಗಳಿವೆ. ಇದರೊಳಗಿನಿಂದ ಅಪಾಯಕಾರಿ ಅನಿಲಗಳು, ನೀರಿನ ಆವಿ, ಕಾರ್ಬನ್ ಡೈ ಆಕ್ಸೆöÊಡ್ ಹಾಗೂ ಮೊನಾಕ್ಸೆöÊಡ್ ಅತಿ ವೇಗದಲ್ಲಿ ಹೊರಚಿಮ್ಮುತ್ತವೆ. ೨೦೦೮ ರಲ್ಲಿ ‘ಕಸಿನಿ’ ಎಂಬ ಬಾಹ್ಯಾಕಾಶ ನೌಕೆಯು ಶನಿಯ ಅಧ್ಯಯನ ನಡೆಸುವ ಸಂದರ್ಭದಲ್ಲಿ ಎನ್ಕಲೇಡಸ್ ಬಳಿ ಸರಿದಾಗ ಈ ದ್ವಾರಗಳಿಂದ ಅತಿ ವೇಗದಲ್ಲಿ ಹೊರಚಿಮ್ಮಿದ ಪದಾರ್ಥಗಳನ್ನು ಅಧ್ಯಯಿಸಿದ ಬಳಿಕ ಮೇಲ್ಕಂಡ ಪದಾರ್ಥಗಳೇ ಹೊರಚಿಮ್ಮಿವೆ ಎಂದು ಅಂದಾಜಿಸಲಾಗಿತ್ತು.

ಪದಾರ್ಥಗಳಲ್ಲಿ ನೀರಿನ ಆವಿ ಕೂಡ ಇದ್ದ ಕಾರಣ, ಇದೀಗ ಮಂಜುಗಡ್ಡೆ ಪದರದ ಕೆಳಗೆ ನೀರಿನ ಸಮುದ್ರವೇ ಇರಬಹುದೆಂಬ ನಂಬಿಕೆಯಲ್ಲಿ ರೋಬಾಟಿಕ್ ಹಾವನ್ನು ಅಲ್ಲಿ ಕಳುಹಿಸಲು ಸಿದ್ಧತೆಗಳು ನಡೆಯುತ್ತಿವೆ. ಮಂಜುಗಡ್ಡೆಯ ದ್ವಾರದೊಳಗೆ ನುಗ್ಗಿ ಈ ನಂಬಿಕೆ, ಊಹೆಯನ್ನು ಸಾಬೀತುಪಡಿಸಲು ಇತರ ಸಾಮಾನ್ಯ ರೊಬಾಟಿಕ್ ವಾಹನಗಳಿಗೆ ಅಸಾಧ್ಯವಾಗಿದ್ದು, ಈ ಹಾವಿಗೆ ಮಾತ್ರ ಸಾಧ್ಯವಾಗಲಿದೆ.

-ಪ್ರಜ್ವಲ್ ಜಿ.ಆರ್.