ಸೋಮವಾರಪೇಟೆ, ಮೇ ೧೭: ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಒಳಗಾಗುತ್ತಿರುವ ತಾಲೂಕು ಕಚೇರಿ ಹಾಗೂ ಹಲವು ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ನೂತನ ಶಾಸಕ ಡಾ. ಮಂಥರ್ ಗೌಡ ಅವರು ದಿಢೀರ್ ಭೇಟಿ ನೀಡಿದರು.
ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನಗತ್ಯ ವಿಳಂಬ, ಕಡತಗಳ ವಿಲೇವಾರಿ ವಿಳಂಬ ಕೆಲವೊಂದು ಕಡತಗಳ ವಿಲೇವಾರಿಗೆ ಹಣದ ಬೇಡಿಕೆ, ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿಕೊಂಡಿರುವ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕರು, ಆಡಳಿತ ಸುಧಾರಣೆಯತ್ತ ಗಮನ ಹರಿಸಿದರು.
ಕಚೇರಿಯಲ್ಲಿ ಕೆಲಸ ಕಾರ್ಯ ಗಳಿಗೆ ಕಡತಗಳನ್ನು ಹಿಡಿದುಕೊಂಡು ನಿಂತಿದ್ದ ಸಾರ್ವಜನಿಕರನ್ನು ಮಾತನಾಡಿಸಿದ ಶಾಸಕರು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಯಾವುದೇ ವಿಳಂಬ ಮಾಡಬಾರದು. ಹಣಕ್ಕಾಗಿ ಬೇಡಿಕೆಯಿಟ್ಟರೆ ಸಹಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರ ರಹಿತವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಉಪಸ್ಥಿತಿಯಲ್ಲಿ ಕಂದಾಯ, ಸರ್ವೆ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳ ತುರ್ತು ಸಭೆ ನಡೆಸಿದ
(ಮೊದಲ ಪುಟದಿಂದ) ಶಾಸಕ ಮಂಥರ್ ಗೌಡ, ಮುಂದಿನ ದಿನಗಳಲ್ಲಿ ಸಾರ್ವಜನಿಕ ರಿಂದ ಯಾವುದೇ ದೂರುಗಳು ಬರಬಾರದು. ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು. ಬಡವರ, ರೈತರ, ಹಿರಿಯ ನಾಗರಿಕರ ಕೆಲಸ ಕಾರ್ಯಗಳನ್ನು ಆದ್ಯತೆಯ ಮೇರೆ ಮಾಡಿಕೊಡಬೇಕು. ಅನಗತ್ಯ ವಿಳಂಬ ಮಾಡಬಾರದು ಎಂದು ಸೂಚಿಸಿದರು.
ಆಡಳಿತದಲ್ಲಿ ಸುಧಾರಣೆಯಾಗ ದಿದ್ದರೆ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭ ಎಚ್ಚರಿಸಿದರು.
ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ವೈದ್ಯರುಗಳಾದ ಡಾ. ಸತೀಶ್‌ಕುಮಾರ್, ಡಾ. ಶಿವಪ್ರಸಾದ್, ಡಾ. ಕಿರಣ್ ಅವರುಗಳೊಂದಿಗೆ ಮಾತುಕತೆ ನಡೆಸಿ, ಆಸ್ಪತ್ರೆಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಆಸ್ಪತ್ರೆಯಲ್ಲಿರುವ ಎಕ್ಸ್ ರೇ ಘಟಕ ಹಳೆಯದಾಗಿರುವುದನ್ನು ಪರಿಶೀಲಿಸಿದ ಶಾಸಕ ಮಂಥರ್ ಗೌಡ ಅವರು, ಅಲ್ಟಾçಸೌಂಡ್ ಸ್ಕಾö್ಯನಿಂಗ್ ಅಳವಡಿಕೆ ಮತ್ತು ಎಕ್ಸ್ ರೇ ಘಟಕಗಳ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಆಸ್ಪತ್ರೆಯಲ್ಲಿ ನಡೆಯುವ ಶಸ್ತç ಚಿಕಿತ್ಸೆಗಳು, ಮೂಲಭೂತ ಸೌಕರ್ಯಗಳು, ಒಳ ಹಾಗೂ ಹೊರ ರೋಗಿಗಳ ಸಂಖ್ಯೆ, ಇತರ ಸೌಲಭ್ಯಗಳ ಬಗ್ಗೆ ಶಾಸಕರು ಮಾಹಿತಿ ಪಡೆದರು.
ಸಣ್ಣಪುಟ್ಟ ಖಾಯಿಲೆಗಳಿಗೆ, ಅಪಘಾತ ಸಂದರ್ಭ ಇಲ್ಲಿ ಸರಿಯಾಗಿ ಚಿಕಿತ್ಸೆ ಲಭಿಸುತ್ತಿಲ್ಲ. ಎಲ್ಲದಕ್ಕೂ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಸ್ಥಳದಲ್ಲಿದ್ದವರು ದೂರಿದರು.
ಈ ಸಂದರ್ಭ ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆಯ ಬಗ್ಗೆ ಮಾಹಿತಿ ಪಡೆದ ಮಂಥರ್ ಗೌಡ, ಆಸ್ಪತ್ರೆಯ ಸಮಗ್ರ ಸುಧಾರಣೆಗಾಗಿ ಯೋಜನಾ ವರದಿ ತಯಾರಿಸಿ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಖಾಲಿ ಇರುವ ವೈದ್ಯರ ಹುದ್ದೆಯನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಮಾತನಾಡಿಸಿದರು.
ಈ ಸಂದರ್ಭ ಪಕ್ಷದ ಮುಖಂಡರುಗಳಾದ ಬಿ.ಬಿ. ಸತೀಶ್, ಎಸ್.ಎಂ.ಡಿಸಿಲ್ವಾ, ಮಿಥುನ್ ಹಾನಗಲ್, ಕೆ.ಎ. ಯಾಕೂಬ್, ಶೀಲಾ ಡಿಸೋಜ ಸೇರಿದಂತೆ ಇತರರು ಉಪಸ್ಥಿತರಿದ್ದರು.