ಸುಂಟಿಕೊಪ್ಪ, ಮೇ ೧೪: ಇಲ್ಲಿನ ಶ್ರೀ ಚಾಮುಂಡೇಶ್ವರಿ ಶ್ರೀ ಮುತ್ತಪ್ಪ ದೇವಸ್ಥಾನದ ಪ್ರಥಮ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನೆರವೇರಿತು.

ತಾ. ೧೨ ರಂದು ಸಂಜೆ ೫ ಗಂಟೆಗೆ ತಂತ್ರಿಯ ಸ್ವೀಕಾರ ೫.೩೦ಕ್ಕೆ ಪಶುದಾನ ಪುನ್ಯಾಹ;, ೫.೪೫ಕ್ಕೆ ಉತ್ಸವ ಮೂರ್ತಿ ಬಿಂಬವನ್ನು ಶಿಲ್ಪಿಯವರಿಂದ ಪಡೆದು ತಂತ್ರಿಗಳಿಗೆ ಒಪ್ಪಿಸಲಾಯಿತು. ೬.೩೦ಕ್ಕೆ ದೀಪಾರಾಧನೆ ಮಂಗಳಾರತಿ ೭ ಗಂಟೆಗೆ ಪ್ರಸಾದ ಶುದ್ದಿ ಶೋಕಾನ ಹೋಮ ಅಸ್ತç ಕಲಶ ೮.೩೦ಕ್ಕೆ ವಾಸ್ತು ಹೋಮ ವಾಸ್ತು ಬಲಿ, ಉತ್ಸವ ಮೂರ್ತಿ ಬಿಂಬ ಶಾಂತಿ, ಕಲಶ ಪೂಜೆ, ಜಲಾಧಿ ಅಸ್ತçಕ್ರಿಯೆ, ವಾಸ್ತು ಶಾಂತಿ, ಕಲಶಾÁಭಿಷೇಕ, ವಾಸ್ತು ಪುನ್ಯಾಹ: ಮಹಾಪೂಜೆಯ ನಂತರ ಪ್ರಸಾದ ವಿತರಿಸಲಾಯಿತು.

ತಾ. ೧೩ ರಂದು ಬೆಳಿಗ್ಗೆ ೫ ಗಂಟೆಗೆ ಶಂಕ ಊದಿ ಪಳ್ಳುಣಕರ್ತಲ್, ೫.೩೦ಕ್ಕೆ ಅಭಿಷೇಕ ಮಲರ್ ನೈವೇಧ್ಯ, ನಂತರ ಗಣಪತಿ ಹೋಮ, ೭ ಗಂಟೆಗೆ ಉಷಾಪೂಜೆ, ೮ ಗಂಟೆಗೆ ಬಿಂಬ ಶುದ್ಧಿ ಕಲಶ ಪೂಜೆ, ೯ ಗಂಟೆಗೆ ಬಿಂಬ ಶುದ್ದಿ ಕಲಶಾಭಿಷೇಕ ಪೂಜೆ ೧೦.೩೦ಕ್ಕೆ ಬ್ರಹ್ಮ ಕಲಶ ಪೂಜೆ, ೧೧.೩೦ಕ್ಕೆ ಕಲಶಾಭಿಷೇಕ ಮಧ್ಯಾಹ್ನ ೧೨ ಗಂಟೆಗೆ ಮಹಾ ಪೂಜೆ ನಂತರ ೧೨.೩೦ ರಿಂದ ಸಂಜೆ ೪ ಗಂಟೆಯವರೆಗೆ ನೆರೆದಿದ್ದ ಜನರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

ಶ್ರೀ ಚಾಮುಂಡೇಶ್ವರಿ ಶ್ರೀ ಮುತ್ತಪ್ಪ ದೇವಸ್ಥಾನದ ಪ್ರಥಮ ವರ್ಷದ ಪ್ರತಿಷ್ಠಾಪನಾ ವಾರ್ಷಿಕಾ ಪೂಜೆಯನ್ನು ತಂತ್ರಿಗಳಾದ ಶಂಕರನ್ ನಂಬೂದರಿ ಹಾಗೂ ತಂಡ ಸುಂಟಿಕೊಪ್ಪ ಮಂಜುನಾಥ ಉಡುಪ ನೆರವೇರಿಸಿದರು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯ. ಕಾರ್ಯದರ್ಶಿ ಡಾ. ಶಶಿಕಾಂತ್ ರೈ, ಖಜಾಂಚಿ ಎಸ್.ಜಿ. ಶ್ರೀನಿವಾಸ್, ಸಲಹೆಗಾರ ಕೆ.ಪಿ. ಜಗನ್ನಾಥ್, ಸಮಿತಿ ಸದಸ್ಯರು ಹಾಜರಿದ್ದರು.