ಮಡಿಕೇರಿ, ಮೇ. ೧೪: ವೀರಾಜಪೇಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ನೀಡಿರುವ ಎಲ್ಲಾ ಭರವಸೆಗಳು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ಗೊಳ್ಳಲಾಗುವುದು ಎಂದು ಕೆಪಿಸಿಸಿ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಮನವಿ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಆಡಳಿತ ವಿರೋಧಿ ಅಲೆಯಿಂದ ಕಾಂಗ್ರೆಸ್‌ಗೆ ಜನ ಆಶೀರ್ವಾದ ಮಾಡಿದ್ದಾರೆ. ಕೊಡಗು ಜಿಲ್ಲೆಯ ಫಲಿತಾಂಶ ಸಮಗ್ರ ಅಭಿವೃದ್ಧಿಯ ದಿಕ್ಸೂಚಿಯಾಗಿದೆ. ಮುಂದಿನ ೫ ವರ್ಷ ರಾಜ್ಯದಲ್ಲಿ ಸುಭದ್ರ ಸರಕಾರ ಇರಲಿದ್ದು, ಜಿಲ್ಲೆಯ ಸಮಸ್ಯೆಗಳು ಶೇ ೧೦೦ ಸ್ಪಂದನ ರಾಜ್ಯ ಸರಕಾರದಿಂದ ದೊರೆಯಲಿದೆ. ಇಲ್ಲಿನ ಶಾಸಕರುಗಳು ಜನರು ಹಾಗೂ ಸರಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಭಾವನಾತ್ಮಕವಾಗಿ ಮತಸೆಳೆಯುವ ತಂತ್ರಗಾರಿಕೆಗೆ ಜನ ಈ ಬಾರಿ ಮನ್ನಣೆ ನೀಡಿಲ್ಲ. ಉತ್ತಮ ಸಮಾಜ ದೃಷ್ಟಿಕೋನದಲ್ಲಿ ಜನರು ವಿದ್ಯಾವಂತರನ್ನು ಆಯ್ಕೆ ಮಾಡಿದ್ದಾರೆ. ಈ ಚುನಾವಣೆ ಅಭಿವೃದ್ಧಿ ಮೇಲಿನ ಚುನಾವಣೆಯಾಗಿತ್ತು ಎಂದು ವಿಶ್ಲೇಷಿಸಿದ ಅವರು, ಕೊರೊನಾ ಪರಿಸ್ಥಿತಿಯಿಂದ ಎ.ಎಸ್. ಪೊನ್ನಣ್ಣ ಸಾಮಾಜಿಕವಾಗಿ ತೊಡಗಿಸಿಕೊಂಡರು. ವಿದ್ಯಾರ್ಥಿ ವೇತನ ನೀಡಿ ನಿಸ್ವಾರ್ಥವಾಗಿ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ. ಆದರೆ, ಬಿಜೆಪಿ ವೈಯಕ್ತಿಕ ತೇಜೋವಧೆ ಮೂಲಕ ಪೊನ್ನಣ್ಣ ಅವರ ಸ್ಥೆöÊರ್ಯ ಕುಗ್ಗಿಸುವ ಯತ್ನ ಸೋತಿದೆ ಎಂದರು.

ಪೊನ್ನಣ್ಣ ಅವರು ಘೋಷಿಸಿದ ಪ್ರಣಾಳಿಕೆಯನ್ನು ಈಡೇರಿಸುವುದು ನಮ್ಮ ಆದ್ಯತೆಯಾಗಿದೆ. ಈ ಸಂಬAಧ ಕೆಲವೇ ದಿನಗಳಲ್ಲಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಭ್ರಷ್ಟಾಚಾರ ಮುಕ್ತ ಕ್ಷೇತ್ರವಾಗಿ ಮಾಡುವ ಗುರಿ ಹೊಂದಲಾಗಿದೆ. ಇದು ಪೊನ್ನಣ್ಣ ಅವರಿಂದ ಸಾಧ್ಯ. ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಈ ಬಾರಿ ಆಗಲಿದೆ. ವನ್ಯಜೀವಿ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸ್ಥಾನಕ್ಕೆ ಮನವಿ

ಸ್ಪಷ್ಟ ಬಹುಮತದೊಂದಿಗೆ ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸಂಪುಟದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರಿಗೆ ಸ್ಥಾನ ನೀಡುವಂತೆ ಮನವಿ ಮಾಡಿದ ಸಂಕೇತ್ ಪೂವಯ್ಯ, ಕೊಡಗು ಜಿಲ್ಲೆಗೆ ಸಂಪುಟದಲ್ಲಿ ಈ ಬಾರಿ ಪ್ರಾತಿನಿಧ್ಯ ದೊರಕಬೇಕು. ಈ ನಿಟ್ಟಿನಲ್ಲಿ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿ ಕೊಡಗಿನ ಉಸ್ತುವಾರಿಯಾಗಿ ಮಾಡಬೇಕು. ಇದರಿಂದ ಜಿಲ್ಲೆಯ ಸಮಸ್ಯೆಗಳು ಸರಕಾರದ ಮಟ್ಟದಲ್ಲಿ ಚರ್ಚೆಯಾಗಿ ಬಗೆಹರಿಯುತ್ತವೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೊಡಗಿನ ಶಾಸಕರುಗಳನ್ನು ಸಚಿವರನ್ನಾಗಿ ಮಾಡಿದೆ. ಜನಪ್ರತಿನಿಧಿಗಳು ಇಲ್ಲದ ಸಂದರ್ಭ ಕೊಡಗಿಗೆ ಸಂಬAಧವಿರುವ ಶಾಸಕರುಗಳಿಗೆ ಕೊಡಗಿನ ಜವಾಬ್ದಾರಿ ನೀಡಲಾಗಿದೆ. ಈ ಬಾರಿ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಭವಿಷ್ಯ ನುಡಿದರು.

ಗೋಷ್ಠಿಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಇಸ್ಮಾಯಿಲ್, ವೀರಾಜಪೇಟೆ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಹೆಚ್. ಮತೀನ್, ವೀರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಬೆಟ್ಟಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀರ್ಥ ಪ್ರಸಾದ್ ಹಾಜರಿದ್ದರು.