ಗೋಣಿಕೊಪ್ಪ ವರದಿ, ಮೇ ೧೩: ಬೈತೂರು ದೇವಸ್ಥಾನದಲ್ಲಿ ನಿತ್ಯಪೂಜೆ ಸಮಯ ವಿಸ್ತರಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಕ್ಕರಾದ ಪುಗ್ಗೇರ ಪೊನ್ನಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂಜಾನೆ ೫.೩೦ ಗಂಟೆಯಿAದ ಬೆಳಿಗ್ಗೆ ೧೧.೩೦ ಗಂಟೆವರೆಗೆ, ಸಾಯಂಕಾಲ ೫.೩೦ ಗಂಟೆಯಿAದ ರಾತ್ರಿ ೭.೩೦ ಗಂಟೆವರೆಗೆ ನಿತ್ಯಪೂಜೆ ನಡೆಯಲಿದೆ. ಸ್ಥಾನದಲ್ಲಿ ಮತ್ತಷ್ಟು ಪಾವಿತ್ರö್ಯತೆ ಕಾಪಾಡಿಕೊಳ್ಳಲು ಭಕ್ತರು ದೇವಸ್ಥಾನ ಸಮೀಪವಿರುವ ಹೊಳೆಯಲ್ಲಿ ಸ್ನಾನ ಮಾಡಿ ದೇವಸ್ಥಾನ ಪ್ರವೇಶಿಸಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.