ಮಡಿಕೇರಿ, ಮೇ ೧೩: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೊಡವ ಸ್ಟೂಡೆಂಟ್ಸ್ ಅಸೋಸಿ ಯೇಷನ್(ಕೆಎಸ್ಪಿ)ನಿಂದ ಇತ್ತೀಚೆಗೆ ಮಂಗಳೂರಿನ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಸಂಘದ ವಾರ್ಷಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಭಾಗವಹಿಸಿದ್ದರು.
ಸಂಘದ ಸಲಹೆಗಾರ ಬಟ್ಟೀರ ಅಜಿತ್ ಬೋಪಯ್ಯ ಅವರ ಮಾರ್ಗದರ್ಶನದಲ್ಲಿ ಅಧ್ಯಕ್ಷ ಮಂಡೇಪAಡ ನಂಜಪ್ಪ, ಉಪಾಧ್ಯಕ್ಷೆ ಬಾಚಿನಾಡಂಡ ಸಿಮ್ಲಾ ಗಣಪತಿ, ಕಾರ್ಯದರ್ಶಿ ಕಾಂಗಿರ ಬಿಷನ್ ಬಿದ್ದಯ್ಯ, ಸಹ-ಕಾರ್ಯದರ್ಶಿ ಬಾಳೆಯಡ ರಿಷಿಕ ತಿಮ್ಮಯ್ಯ, ಕ್ರೀಡಾ ಕಾರ್ಯದರ್ಶಿ ಮಂಡುವAಡ ತಮ್ಮಯ್ಯ, ಸಹ-ಕ್ರೀಡಾ ಕಾರ್ಯದರ್ಶಿ ಚೀಕಂಡ ಪ್ರಕೃತಿ ಪೊನ್ನಮ್ಮ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿಕೊಟ್ಟರು.
ಮುಖ್ಯ ಅತಿಥಿ ದಿನೇಶ್ ಕಾರ್ಯಪ್ಪ ಅವರು ಮಾತನಾಡಿ, ಸಮಾಜದಲ್ಲಿ ನವ ಉದ್ಯಮಗಳ ಪ್ರಾಮುಖ್ಯತೆಯ ಕುರಿತು ವಿವರಿಸಿದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಬಾಲಕಿಯರಿಂದÀ ನೃತ್ಯ ಹಾಗೂ ಬಾಲಕರಿಂದ ಬೊಳಕಾಟ್ ಜರುಗಿತು. ಕಲ್ಮಾಡಂಡ ರಾಬಿನ್ ಅಚ್ಚಮ್ಮ ಅವರು ಸರಿಯಾದ ರೀತಿಯಲ್ಲಿ ಮಂಡೆತುಣಿ, ವಸ್ತç, ಚೇಲೆ ಕಟ್ಟುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರವಿತ್ತರು.