ಮಡಿಕೇರಿ, ಮೇ ೧೩: ಕೊಡಗು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿ ಯೇಷನ್ ವತಿಯಿಂದ ಜೂ. ೪ ರಂದು ಪೊನ್ನಂಪೇಟೆಯಲ್ಲಿ ಹಿರಿಯ ಅಥ್ಲಿಟ್‌ಗಳಿಗೆ ನಾಲ್ಕು ವಿಭಾಗಗಳಲ್ಲಿ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಿಂದ ಹಳ್ಳಿಗಟ್ಟು ಮಾರ್ಗವಾಗಿ ಮತ್ತೆ ಶಾಲಾ ಮೈದಾನ ಸೇರುವಂತೆ ೫ ಕಿ.ಮೀ. ದೂರದ ಮ್ಯಾರಥಾನ್ ಸ್ಪರ್ಧೆ ಅಂದು ಬೆಳಿಗ್ಗೆ ೬.೩೦ ಗಂಟೆಗೆ ನಡೆಯಲಿದೆ ಎಂದು ತಿಳಿಸಿದರು. ೩೫ ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳಾ ಅಥ್ಲಿಟ್‌ಗಳು ಪಾಲ್ಗೊಳ್ಳಬಹುದಾಗಿದೆ. ಸ್ಪರ್ಧೆ ೩೫ ವರ್ಷದಿಂದ ೪೪ ವರ್ಷದ ಒಳಗಿನ ವಿಭಾಗ, ೪೫ ರಿಂದ ೫೪ ವರ್ಷದ ಒಳಗಿನವರು, ೫೫ ರಿಂದ ೬೪ ವರ್ಷ ಹಾಗೂ ೬೪ ವರ್ಷ ಮೇಲ್ಪಟ್ಟವರ ವಿಭಾ ಗಗಳಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿರುವ ಪ್ರತಿಭಾವಂತ ಹಿರಿಯ ಕ್ರೀಡಾಪಟು ಗಳನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಹೇಳಿದರು. ತಾ. ೩೦ ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ. ತಮ್ಮ ವಯಸ್ಸಿನ ದೃಢೀಕರಣಕ್ಕೆ ಆಧಾರ್ ಸಲ್ಲಿಸುವುದು ಕಡ್ಡಾಯವೆಂದು ತಿಳಿಸಿ, ಹೆಚ್ಚಿನ ಮಾಹಿತಿಗಾಗಿ ಬಲ್ಯಮೀದೇರಿರ ಪ್ರಕಾಶ್ ಮೊ. ೮೮೬೧೦೨೨೦೭೬, ಮೂಕಳೇರ ಮೀರಾ ಅಶೋಕ್ ಮೊ. ೯೭೩೯೧೯೬೧೨೩, ೮೪೫೩೬೪೩೮೦೮ನ್ನು ಸಂಪರ್ಕಿಸಬಹುದೆAದು ಸ್ಪಷ್ಟಪಡಿಸಿದರು. ಪಾಲಿಬೆಟ್ಟದ ದೈಹಿಕ ಶಿಕ್ಷಣ ಶಿಕ್ಷಕಿ ಮೂಕಳೇರ ಮೀರಾ ಅಶೋಕ್ ಮಾತನಾಡಿ, ಜಿಲ್ಲೆಯಲ್ಲಿರುವ ೯ ಮಂದಿ ಹಿರಿಯ ಕ್ರೀಡಾಪಟುಗಳು ಮಲೇಷಿಯಾ, ಆಸ್ಟೆçÃಲಿಯಾ ಸೇರಿದಂತೆ ವಿವಿಧೆಡೆಗಳಲ್ಲಿ ನಡೆದ ಅಂರ‍್ರಾಷ್ಟಿçÃಯ ಮಟ್ಟದ ಮಾಸ್ರ‍್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಉನ್ನತ ಸಾಧನೆ ಮಾಡಿದ್ದಾರೆಂದು ತಿಳಿಸಿದರು.
ಗೋಷ್ಠಿಯಲ್ಲಿ ಅಸೋಸಿ ಯೇಷನ್ ಕಾರ್ಯದರ್ಶಿ ಮುಲ್ಲೇರ ಪೊನ್ನಮ್ಮ, ಅಂತರಾಷ್ಟಿçÃಯ ಕ್ರೀಡಾಪಟು ಹೊಸೊಕ್ಲು ಚಿಣ್ಣಪ್ಪ, ಸದಸ್ಯರಾದ ಕಂಬೀರAಡ ಕಿಟ್ಟು ಕಾಳಪ್ಪ ಉಪಸ್ಥಿತರಿದ್ದರು.