ವೀರಾಜಪೇಟೆ, ಮೇ ೧೩: ನಮ್ಮ ದೇಶಕ್ಕೆ ಮುಖ್ಯವಾಗಿ ಬೇಕಾಗಿ ರುವುದು ಗುಣಮಟ್ಟವುಳ್ಳ ಶಿಕ್ಷಣ ಸಂಸ್ಥೆಗಳು. ದೇಶದ ಅತ್ಯುನ್ನತ ಕಾಲೇಜುಗಳಲ್ಲಿ ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಕಾಲೇಜು ಕೂಡ ಒಂದು ಎಂದು ಕ್ಲಿನಿಕಲ್ ಫಾರ್ಮಾಕೊಲೊಜಿಸ್ಟ್ ನಿರ್ದೇಶಕರಾದ ಡಾ. ಕ್ರತೀಶ್ ಬೋಪಣ್ಣ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಮಗ್ಗುಲ ಗ್ರಾಮದಲ್ಲಿರುವ ಕೊಡಗು ದಂತ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಕೊಡಗು ದಂತ ವೈದ್ಯಕೀಯ ಕಾಲೇಜಿನ ೨೧ ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು, ಕ್ಲಿನಿಕಲ್ ಫಾರ್ಮಾ ಕೊಲೊಜಿಸ್ಟ್ ನಿರ್ದೇಶಕರಾದ ಡಾ. ಕ್ರತೀಶ್ ಬೋಪಣ್ಣ ಕಾರ್ಯಕ್ರಮ ವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಮ್ಮ ದೇಶದಲ್ಲಿ ಐದು ಸಾವಿರಕ್ಕೆ ಒಬ್ಬರು ದಂತ ವೈದ್ಯರು ಇದ್ದಾರೆ. ಬೇರೆ ದೇಶಗಳಲ್ಲಿ ಏಳು ಸಾವಿರ ಜನರಿ ಗೊಬ್ಬರು ದಂತ ವೈದ್ಯರು ಇರುವ ಪರಿಸ್ಥಿತಿ ಇದೆ. ಆದರೆ ಭಾರತದಲ್ಲಿ ಬಾಯಿಯ ಶುಚಿತ್ವದ ಬಗ್ಗೆ ಜನರು ಹೆಚ್ಚು ಗಮನಹರಿಸಬೇಕಿದೆ. ಬಾಯಿಯ ಮೂಲಕವೇ ಅನೇಕ ಖಾಯಿಲೆಗಳು ಮನುಷ್ಯರಿಗೆ ಹರಡುವ ಸಾಧ್ಯತೆಗಳಿವೆ. ದಂತ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ಆಗಬೇಕಿದೆ. ದಂತ ವಿಜ್ಞಾನದಲ್ಲಿ ಕೃತಕ ಬುದ್ಧಿಮತ್ತೆಗೆ ಹೆಚ್ಚು ಒತ್ತು ನೀಡಬೇಕು. ಜೊತೆಗೆ ರೋಬೋಟಿಕ್ ವಿಜ್ಞಾನವನ್ನು ಬಳಕೆ ಮಾಡಿಕೊಳ್ಳುವುದರ ಬಗ್ಗೆಯೂ ಚಿಂತನೆ ನಡೆಸಬೇಕು ಎಂದರು. ಕೊಡಗು ದಂತ ವೈದ್ಯಕೀಯ ಕಾಲೇಜಿನ ಡೀನ್ ಕಂಜಿತAಡ ಡಾ. ಸುನೀಲ್ ಮುದ್ದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ಪೊನ್ನಪ್ಪ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕೆÀ್ಷ ಲಿಯಾನಾ ಸಿ.ಬಿ ಸ್ವಾಗತಿಸಿದರೆ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಂಜೇಶ್ ಮೌರ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ವರದಿ ಹಾಗೂ ಸಾಂಸ್ಕöÈತಿಕ ವರದಿ ವಾಚಿಸಿ ವಿಜೇತರಿಗೆ ಬಹು ಮಾನಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದಿAದ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಿತು.