ಕೂಡಿಗೆ ಮೇ ೧೧: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ಕೂಡ್ಲೂರು ಇಂಡಸ್ಟಿçÃಯಲ್ ಏರಿಯಾದ ಕಾರ್ಮಿಕ ಸಂಘದ ವತಿಯಿಂದ ಕೈಗಾರಿಕಾ ಕೇಂದ್ರ ದಲ್ಲಿ ಕಾರ್ಮಿಕ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯ ಕ್ರಮದ ಉದ್ಘಾಟನೆಯನ್ನು ರಾಮೇಶ್ವರ ಕೂಡುಮಂಗಳೂರು ಸಹಕಾರ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ನೆರವೇರಿಸಿದರು. ನಂತರ ಮಾತನಾಡಿ, ದೇಶದಲ್ಲಿ ಕಾರ್ಮಿಕರ ಸಂಘಟನೆ ಬಲಶಾಲಿಯಾಗಿದೆ. ಅದರನ್ವಯ ಕಾರ್ಮಿಕ ಇಲಾಖೆ ವತಿಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಮುಂದಾಗ ಬೇಕೆಂದು ಸಲಹೆ ನೀಡಿದರು. ಸಮರ್ಪಕ ದಾಖಲೆಯನ್ನು ಸಂಬAಧಿಸಿದ ಇಲಾಖೆಯವರಿಗೆ ಒದಗಿಸುವ ಮೂಲಕ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲ ರಾಗಬೇಕೆಂದು ತಿಳಿಸಿದರು. ಕೂಡ್ಲೂರು ಇಂಡಸ್ಟಿçÃಯಲ್ ಏರಿಯಾದ ಕಾರ್ಮಿಕ ಸಂಘದ ಅಧ್ಯಕ್ಷ ಮಂಜುನಾಥ, ಮಹಿಳಾ ಘಟಕದ ಅಧ್ಯಕ್ಷೆ ಲೀಲಾವತಿ, ಸುಜಾತ, ಕಾರ್ಮಿಕ ಮಹಿಳೆಯರು, ಪುರುಷರು ಹಾಗೂ ಕೈಗಾರಿಕಾ ಕೇಂದ್ರದ ವಿವಿಧ ಕಾಫಿ ಸಂಸ್ಕರಣಾ ಘಟಕಗಳ ಕಾರ್ಮಿಕರ ವರ್ಗದವರು ಹಾಜರಿದ್ದರು.