ವೀರಾಜಪೇಟೆ, ಮೇ ೧೧: ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದ ಕಿರು ಹೊಳೆಯ ಬದಿಯಲ್ಲಿ ಮಾಂಸದ ತ್ಯಾಜ್ಯ ವಸ್ತುಗಳ ಚೀಲವನ್ನು ಎಸೆದು ಹೊಳೆ ಸೇರಿದಂತೆ ಪರಿಸರವನ್ನು ಮಲೀನಗೊಳಿಸಲಾಗಿದೆ. ದೂರು ಬಂದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಪಿ.ಡಿ.ಓ. ಪ್ರಮೋದ್ ಮತ್ತು ವಾರ್ಡಿನ ಸದಸ್ಯರಾದ ಎಂ.ಎA. ಇಸ್ಮಾಯಿಲ್ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಹೊಳೆಯು ಮಲೀನವಾಗಿದೆ. ಹೊಳೆಯ ಇಕ್ಕೆಲಗಳಲ್ಲಿ ಕಾಲಿ ಬಾಟೆಲ್ಗಳು ಕಾಣಸಿಗುತ್ತದೆ. ಪ್ರಮುಖ ರಸ್ತೆಯಿಂದ ಅಲ್ಪ ದೂರ ಕ್ರಮಿಸಿದರೆ ಆಲದ ಮರವು ಅನೈತಿಕ ಚಟುವಟಿಕೆಗಳ ಆಶ್ರಯತಾಣವಾಗಿ ಪರಿಣಮಿಸಿದೆ. ಇಲ್ಲಿ ಎಲ್ಲಂದರೆ ಅಲ್ಲಿ ಕಾಣುವುದು ಕಸದ ರಾಶಿ, ಮನೆಯ ತ್ಯಾಜ್ಯ, ಸಮಾರಂಭಗಳ ತ್ಯಾಜ್ಯ, ಮಾಂಸ ತ್ಯಾಜ್ಯದ ಚೀಲಗಳು. ಪರಿಸರಕ್ಕೆ ಮಾರಕವಾಗುವ ಸರ್ವ ರೀತಿಯ ವಸ್ತುಗಳು ದಾರಿಹೋಕರಿಗೆ ದರ್ಶನಕ್ಕೆ ಸಿಗುತ್ತದೆ. ಪ್ರಮುಖ ರಸ್ತೆಯಲ್ಲಿ ಕ್ರಮಿಸುವ ಸಂಚಾರಿಗಳು ಅಲ್ಪ ದೂರದವರೆಗೆ ಮೂಗು ಮುಚ್ಚಿಕೊಂಡು ತೆರಳುವ ಅನಿವಾರ್ಯತೆಯಿದೆ. ಕಿಡಿಗೇಡಿಯೋರ್ವನು ಮಾಂಸದ ತ್ಯಾಜ್ಯ ಅಂದರೆ, ಪ್ರಾಣಿ ಚರ್ಮ ಮತ್ತು ಇತರ ತ್ಯಾಜ್ಯ ತುಂಬಿದ ಚೀಲವನ್ನು ಸ್ಥಳದಲ್ಲಿ ಎಸೆದು ಪರಾರಿಯಾಗಲು ಯತ್ನಿಸಿದ್ದಾನೆ. ಸ್ಥಳದ ಮಾಲೀಕರ ರೈಟರ್ ವ್ಯಕ್ತಿಯ ಚಿತ್ರವನ್ನು ತನ್ನ ಮೊಬೈಲ್ನಲ್ಲಿ ಸೆರೆಹಿಡಿದು ಘಟನೆ ಚಿತ್ರಣವನ್ನು ಮಾಲೀಕರಿಗೆ ತಿಳಿಸಿದ್ದಾರೆ. ತೋಟದ ಮಾಲೀಕರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಸ್ಥಳದ ವಿವರಣೆಯನ್ನು ಪಡೆದು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದೆ. ಈ ಸ್ಥಳವು ಹೊಳೆಯ ತಟದಲ್ಲಿದೆ. ದಾರಿಹೋಕರು ಮತ್ತು ಕೆಲವು ಕಿಡಿಗೇಡಿಗಳು ಸಂಜೆ ವೇಳೆಗೆ ಮನೆಯ ತ್ಯಾಜ್ಯ ಮತ್ತು ಇತರ ತ್ಯಾಜ್ಯಗಳನ್ನು ಎಸೆದು ತೆರಳುತ್ತಿರುವುದು ಸಾಮಾನ್ಯವಾಗಿದೆ. ಹಲವು ಬಾರಿ ಗ್ರಾಮ ಪಂಚಾಯಿತಿಯು ಕ್ರಮವಹಿಸಿದ್ದರೂ ಯಾವುದೇ ಪ್ರಯೋಜನ ಕಂಡಿಲ್ಲ. ಕೆ. ಬೋಯಿಕೇರಿ ಮತ್ತು ಕೆದಮುಳ್ಳೂರು ಭಾಗದಿಂದ ಸಂಜೆ ಅಥವಾ ಮುಂಜಾನೆಯ ಸಮಯದಲ್ಲಿ ತ್ಯಾಜ್ಯದ ಚೀಲವನ್ನು ಎಸೆದುಹೋಗುತ್ತಿದ್ದಾರೆ. ದಾರಿಹೋಕರಿಗೆ ಪ್ರಾಣ ಸಂಕಟವಾಗಿದೆ. ತ್ಯಾಜ್ಯದಿಂದಾಗಿ ಬೀದಿ ನಾಯಿಗಳ ಹಾವಳಿಯೂ ಮುಗಿಲುಮುಟ್ಟಿದೆ. ಶನಿವಾರ ದಿನದಂದು ತ್ಯಾಜ್ಯದ ಚೀಲವನ್ನು ಎಸೆಯುತ್ತಿದ್ದ ವ್ಯಕ್ತಿಯು ವಸ್ತು ಸಮೇತವಾಗಿ ಸಿಕ್ಕಿಬಿದ್ದಿದ್ದಾನೆ. ಈತನ ಮಾಹಿತಿ ದೊರಕಿದೆ ಈತನ ಮೇಲೆ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಲಾಗಿದೆ ಎಂದು ಸ್ಥಳೀಯರಾದ ಕೋದಂಡ ಅಜಯ್ ಮುತ್ತಣ್ಣ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಸ್ಥಳವು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಕಿರುಹೊಳೆಯನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ರಸ್ತೆಯ ಬದಿಗಳಲ್ಲಿ ಪಂಚಾಯಿತಿ ವತಿಯಿಂದ ಸೂಚನಾ ಫಲಕ ಅಳವಡಿಸಲಾಗಿದೆ. ಆದರೂ ಅನಾಗರಿಕರಂತೆ ವರ್ತಿಸುವ ಕೆಲವು ಮಂದಿ ತಮ್ಮ ಮನೆಯ, ಸಂಸ್ಥೆಯ ಹಾಗೂ ಮಾಂಸದ ತ್ಯಾಜ್ಯವನ್ನು ನದಿಯ ತಟದಲ್ಲಿ ಸುರಿದು ತೆರಳುತ್ತಿದ್ದಾರೆ. ಇದರಿಂದ ಪರಿಸರವು ಹಾನಿಯಾಗುತ್ತಿದೆ. ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಕೆದಮುಳ್ಳೂರು ಪಿ.ಡಿ.ಓ. ಪ್ರಮೋದ್ ತಿಳಿಸಿದ್ದಾರೆ. ಪಂಚಾಯಿತಿ ವತಿಯಿಂದ ಹಲವು ಬಾರಿ ಸ್ವಚ್ಛಗೊಳಿಸಲಾಗಿದೆ. ಸಾರ್ವಜನಿಕರಿಗೆ ಅರ್ಥವಾಗುವಂತೆ ಮೂರು ದಿಕ್ಕುಗಳಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಕಸ ಹಾಕುವವರಿಗೆ ದಂಡವಿಧಿಸಲಾಗುತ್ತದೆ ಎಂದು ತಿಳಿದಿದ್ದರೂ ಮೂರ್ಖತನವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಗಳು ಕೋಳಿ ಮತ್ತು ಕುರಿ ಮಾಂಸದ ತ್ಯಾಜ್ಯದ ಚೀಲವನ್ನು ಎಸೆದು ಪರಾರಿಯಾಗಿದ್ದಾರೆ. ಇದನ್ನು ನೋಡಿದ ವ್ಯಕ್ತಿಯೋರ್ವರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ಈ ಘಟನೆಗೆ ಸಂಬAಧಿಸಿದAತೆ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. ಸಾರ್ವಜನಿಕರು ಪರಿಸರವನ್ನು ಹಾಳುಮಾಡದೆ ಪರಿಸರವನ್ನು ಉಳಿಸುವಲ್ಲಿ ಪಂಚಾಯಿತಿಯೊAದಿಗೆ ಕೈಜೋಡಿಸಬೇಕು ಎಂದು ವಾರ್ಡ್ ಸದಸ್ಯ ಎಂ.ಎA. ಇಸ್ಮಾಯಿಲ್ ತಿಳಿಸಿದ್ದಾರೆ. - ಕಿಶೋರ್ ಕುಮಾರ್ ಶೆಟ್ಟಿ