ವೀರಾಜಪೇಟೆ, ಮೇ ೧೧: ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ವಿಶ್ವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ‘ಜ್ಞಾನಗಂಗಾ ಭವನ’ ಸೇವಾ ಕೇಂದ್ರದ ಮುಖ್ಯ ಸಂಚಾಲಕಿ ಬಿ.ಕೆ ಕೋಮಲ ಅವರ ನೇತೃತ್ವದಲ್ಲಿ ನಡೆದ ‘ಚಿಣ್ಣರ ಬೇಸಿಗೆ ಸಂಭ್ರಮ’ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಮುಖ್ಯ ಅತಿಥಿ ನಾಟ್ಯಮಯೂರಿ ನೃತ್ಯ ಶಾಲೆಯ ಸಂಸ್ಥಾಪಕಿ ವಿದುಷಿ ಪ್ರೇಮಾಂಜಲಿ ಆಚಾರ್ಯ ನೆರವೇರಿಸಿದರು. ದೇವರಪುರ ಸರಕಾರಿ ಹಿರಿಯ ಪ್ರೌಢಶಾಲೆ ಶಿಕ್ಷಕಿ ಅನಿಲ ಅವರು ಪರೀಕ್ಷೆಯ ಭಯ ನಿವಾರಣೆ ಮತ್ತು ಏಕಾಗ್ರತೆಯ ಬಗ್ಗೆ ಎರಡು ದಿನಗಳ ತರಗತಿಯನ್ನು ನಡೆಸಿದರು.
ಮುಖ್ಯ ಸಂಚಾಲಕಿ ಬಿ.ಕೆ ಕೋಮಲ ಅವರು ಪರಮಾತ್ಮನ ಜ್ಞಾನ ಮತ್ತು ಧ್ಯಾನ ಮಾಡುವುದರಿಂದಲೇ ನಮ್ಮಲ್ಲಿ ಶಿಸ್ತು, ಶಾಂತಿ, ಪ್ರೀತಿ, ದಯೆ, ಸತ್ಯತೆ ಇತ್ಯಾದಿ ಮೌಲ್ಯಗಳು ಬರಲು ಸಾಧ್ಯವೆಂದು ಮಕ್ಕಳಿಗೆ ಮೌಲ್ಯಗಳ ಮಹತ್ವಿಕೆಯನ್ನು ತಿಳಿಸಿದರು.
ಪ್ರಥಮ ಫೌಂಡೇಶನ್ ಮೈಸೂರು ಶಾಖೆಯ ಜನಿತಾ ಅವರು ಮಕ್ಕಳಿಗೆ ಸರಳವಾದ ಕರಕುಶಲತೆ (ಕ್ರಾಫ್ಟ್)ಅನ್ನು ಮಾಡಿಸಿದರು. ಬ್ರಹ್ಮಕುಮಾರಿಯರಾದ ಬಿ.ಕೆ. ಮಹಾಲಕ್ಷಿö್ಮ, ವೈಷ್ಣವಿ, ಶಿವಾನಿ, ಅದ್ವಿತೀಯ ಹಾಡು ನೃತ್ಯ ಆಟೋಟಗಳ ಚಟುವಟಿಕೆಯನ್ನು ಮಾಡಿ ಮಕ್ಕಳಿಗೂ ಹೇಳಿಕೊಡುವುದರ ಮೂಲಕ ಮಕ್ಕಳನ್ನು ರಂಜಿಸಿದರು. ಮೂರು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ೧೦ರಿಂದ ೧೬ ವರ್ಷದೊಳಗಿನ ಸುಮಾರು ೫೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಶಿಬಿರದಲ್ಲಿ ಗೋಣಿಕೊಪ್ಪಲು ಶಾಖೆಯ ಬಿ.ಕೆ ಚಂದ್ರಿಕಾ, ಬ್ರಹ್ಮಕುಮಾರಿ ಕುಶಾಲನಗರ ಸೇವಾ ಕೇಂದ್ರದ ಲಲಿತಾ ಮಣಿ ಉಪಸ್ಥಿತರಿದ್ದರು. ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ಆಲೋಚನೆಯ ನೆಲೆ, ಏಕಾಗ್ರತೆಯ ಕಲೆ, ಪರೀಕ್ಷಾ ಭಯದ ನಿವಾರಣೆ, ಧ್ಯಾನದ ಮಹತ್ವಿಕೆ, ಕ್ರಿಯೆಯಲ್ಲಿ ಆಲೋಚನೆಗಳು, ಮೌಲ್ಯಗಳು, ಗುಂಪು ಚಟುವಟಿಕೆಗಳು, ಒಳಾಂಗಣ, ಹೊರಾಂಗಣ ಆಟೋಟ ಗಳು ಸೇರಿದಂತೆ ಇತರ ಚಟುವಟಿಕೆಗಳು ನಡೆಯಿತು. ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಾನೀಯಗಳು, ತಿಂಡಿ, ಹಾಗೂ ಮಧ್ಯಾಹ್ನದ ಭೋಜನವನ್ನು ಸೇವಾ ಕೇಂದ್ರದಿAದಲೇ ಮಾಡಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.