ಮಡಿಕೇರಿ, ಮೇ ೧೦: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ದೇಶದ ಪ್ರತಿ ನಾಗರಿಕರ ಪ್ರಮುಖ ಹಕ್ಕು. ಆದರೆ, ಎಲ್ಲರೂ ಕಾಳಜಿ ತೋರದÀ ಪರಿಸ್ಥಿತಿ ಒಂದು ರೀತಿಯಲ್ಲಿ ವಿಪರ್ಯಾಸ. ಚುನಾವಣೆಗಳು ಬಂತೆAದರೆ ಮತ ಚಲಾಯಿಸುವಂತೆ ಜನರನ್ನು ಪ್ರೇರೇಪಿಸುವುದೂ ಈಗಿನ ದಿನಗಳಲ್ಲಿ ಕಂಡುಬರುತ್ತಿರುವ ಕರ್ತವ್ಯಗಳಲ್ಲಿ ಒಂದು ಎಂಬAತಾಗಿದೆ. ಚುನಾವಣಾ ಆಯೋಗ ಇದಕ್ಕಾಗಿಯೇ ಅದೆಷ್ಟೋ ಖರ್ಚು ಮಾಡಬೇಕಾಗುತ್ತದೆ. ಇಂತಹದ್ದರ ನಡುವೆ ಮಡಿಕೇರಿಯ ಹಿರಿಯ ನಾಗರಿಕರಾಗಿರುವ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಬೊಟ್ಟೋಳಂಡ ಮಿಟ್ಟು ಚಂಗಪ್ಪ
(ಮೊದಲ ಪುಟದಿಂದ) ಅವರು ಯುವ ಮತದಾರರಿಗೆ ಪ್ರೇರಣೆಯಾಗಿದ್ದಾರೆ. ತಮಗೆ ಮತದ ಹಕ್ಕು ಬಂದ ಬಳಿಕದಿಂದ ಇವರು ಪ್ರತೀ ಚುನಾವಣೆಯಲ್ಲಿ ತಮ್ಮ ಮತಗಟ್ಟೆಯಲ್ಲಿ ಪ್ರಥಮ ವ್ಯಕ್ತಿಯಾಗಿ ಮತ ಚಲಾಯಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಮಿಟ್ಟು ಅವರು ೩೦ನೇ ಬಾರಿಗೆ ಪ್ರಥಮ ಮತ ಚಲಾಯಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.
೧೯೬೨ರಿಂದ ಇವರು ಈ ವಿಶಿಷ್ಟತೆ ಆರಂಭಿಸಿದ್ದಾರೆ. ಪ್ರಥಮ ಬಾರಿಗೆ ಮತ ಚಲಾಯಿಸಿದ್ದು, ಹೊಸ್ಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ. ಆ ನಂತರದಲ್ಲಿ ವಿಧಾನಸಭೆ, ಲೋಕಸಭೆ, ನಗರಸಭೆ... ಈ ರೀತಿಯಾಗಿ ಯಾವುದೇ ಚುನಾವಣೆ ನಡೆದರೂ ಇವರು ತಮ್ಮ ಮತಗಟ್ಟೆಯಲ್ಲಿ ಪ್ರಥಮ ಮತ ಚಲಾಯಿಸಿದ್ದಾರೆ. ಈ ಬಾರಿಯೂ ಪತ್ನಿ ಯಶಿ ಚಂಗಪ್ಪರೊAದಿಗೆ ಮಡಿಕೇರಿಯ ಸಂತಮೈಕಲರ ಶಾಲಾ ಮತಗಟ್ಟೆಯಲ್ಲಿ ಪ್ರಥಮ ಮತ ಚಲಾಯಿಸಿದ್ದಾರೆ. ವಿಶೇಷವೆಂದರೆ ಈ ಬಾರಿ ಇವರಿಗೆ ೮೨ರ ಇಳಿವಯಸ್ಸು. ಕಣ್ಣಿನ ಶಸ್ತçಚಿಕಿತ್ಸೆಗೆ ಒಳಗಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೂ ಈ ಹಿಂದಿನAತೆ ಉತ್ಸುಕತೆಯಿಂದ ಮತಗಟ್ಟೆಗೆ ಖುದ್ದಾಗಿ ಆಗಮಿಸಿದ್ದಾರೆ. ತಮ್ಮ ಈ ಪ್ರಯತ್ನಕ್ಕೆ ವಿವಾಹವಾದ ಬಳಿಕ ಪತ್ನಿ ಯಶಿ, ನಂತರದಲ್ಲಿ ಮಕ್ಕಳಾದ ಕಾವ್ಯ, ಕೃತಿ ಅವರುಗಳೂ ಸಹಕಾರ ನೀಡಿದ್ದಾರೆ. ಮತದಾನ ಪ್ರಜಾಪ್ರಭುತ್ವದ ಒಂದು ಹಬ್ಬ. ಇದನ್ನು ಎಲ್ಲರೂ ಸಂಭ್ರಮಿಸಬೇಕು ಎನ್ನುವ ಮಿಟ್ಟು ಚಂಗಪ್ಪ, ಮತ ಚಲಾವಣೆ ಬಳಿಕ ಕುಟುಂಬ ಸದಸ್ಯರೊಂದಿಗೆ ಆ ದಿನದ ‘ಬ್ರೇಕ್ ಫಾಸ್ಟ್’ ಅನ್ನು ಒಂದೆಡೆ ಕಲೆತು ಸಡಗರದಿಂದ ಸೇವಿಸುವುದು ಇವರ ವಿಶೇಷತೆಯಾಗಿದೆ. ಕಳೆದ ಹಲವಷ್ಟು ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಇವರು ನಿಭಾಯಿಸಿದ್ದಾರೆ. ಎಲ್ಲೂ ಪಕ್ಷಾಂತರ ಮಾಡಿಲ್ಲ. ಆಯಾ ಪಕ್ಷಕ್ಕೆ ಬದ್ಧರಾಗಿರಬೇಕು. ಆದರೆ, ಪ್ರಸ್ತುತದ ರಾಜಕೀಯ ಮೇಲಾಟಗಳು ನೋವುಂಟುಮಾಡುತ್ತಿವೆ. ಹಿಂದೆ ತ್ಯಾಗ, ಸಿದ್ಧಾಂತ, ಸಮರ್ಪಣಾಭಾವ ಇತ್ತು. ಆದರೆ ಈಗ ಎಲ್ಲವೂ ಹಣದ ಮೇಲೆ ಅವಲಂಬಿತವಾದAತಿದೆ ಎನ್ನುವ ಅವರು, ಕೇವಲ ಎರಡೇ ಪಕ್ಷಗಳು ಪ್ರಬಲವಾಗಿರಬೇಕು. ಜನರಲ್ಲೂ ರಾಜಕೀಯ ಆಸಕ್ತಿ ಬೇಕು. ಹೀಗಿದ್ದರೆ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಯುವಜನಾಂಗ ತಮ್ಮ ಹಕ್ಕಿನ ಬಗ್ಗೆ ಜಾಗೃತರಾಗಬೇಕೆಂದೂ ಅವರು ಸಲಹೆಯಿತ್ತಿದ್ದಾರೆ.
-ಶಶಿ.