ಆದಿ ಮಾನವನ ಕಾಲದಲ್ಲೇ ಕ್ರೀಡೆಗಳು ಮಾನವನಿಗೆ ಮನೋರಂಜನೆ ಗಾಗಿ ಅವಶ್ಯವಾಗಿತ್ತು. ಅಂದು ಆತ ತನ್ನ ಮೂಲಭೂತ ಅವಶ್ಯಕತೆಗಳಿಗಾಗಿ ಒಂದಲ್ಲ ಒಂದು ದೈಹಿಕ ಮಾನಸಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಬೌದ್ಧಿಕವಾಗಿ ವಿಕಾಸಗೊಂಡAತೆ ಆಟೋಟಗಳು ಆತನ ಮನರಂಜಿಸಿತು. ಅದಕ್ಕೊಂದು ರೂಪುಕೊಡುತ್ತಾ ಬರಲಾರಂಭಿಸಿದ. ಹೀಗೆ ಕ್ರೀಡೆಗಳು ಪ್ರಾಚೀನ ಕಾಲದಿಂದಲೇ ನಡೆಯುತ್ತಾ ಬೆಳೆಯುತ್ತಾ ಬಂದವು.

ಮಾನವ ತನ್ನ ಆಹಾರ, ವಸತಿ, ಉಡುಪುಗಳಿಗಾಗಿ ನಡೆಯುತ್ತಿದ್ದ ಉದ್ದೇಶಪೂರ್ವಕ ಚಟುವಟಿಕೆಗಳೆಲ್ಲವೂ ಕ್ರೀಡೆಯ ಹಿನ್ನೆಲೆಯುಳ್ಳದ್ದು, ಮನುಷ್ಯ ಹೊಟ್ಟೆ ತುಂಬಿಸಿ ಪ್ರಾಣಿಗಳನ್ನು ಕೊಲ್ಲಬೇಕಾಗಿತ್ತು. ಓಡುವುದು, ಹಾರುವುದು, ಕಲ್ಲು ಈಟಿ ಎಸೆಯುವುದು ಮುಂತಾದ ಚಟುವಟಿಕೆಗಳು ಇಂದು ಆಟೋಟಗಳ ಕ್ರೀಡಾ ರೂಪ ಪಡೆದಿದೆ. ಕುದುರೆ ಸವಾರಿ ರಥ, ಆನೆ ಸವಾರಿ ಈ ಎಲ್ಲಾ ಹಿಂದಿನ ಯುದ್ಧದ ಸಂದರ್ಭದ ಚಟುವಟಿಕೆಗಳು ಇಂದು ಕ್ರೀಡಾ, ಮನೋರಂಜನಾ ರೂಪದಲ್ಲಿವೆ.

‘ಕ್ರೀಡೆಯಲ್ಲಿ ದೊರೆಯುವ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ಲಾಭಗಳಿಗಾಗಿ ಮಾತ್ರ ನಾನು ಅದರಲ್ಲಿ ಭಾಗವಹಿಸಿದ್ದೇನೆ. ಕ್ರೀಡೆ ನನಗೆ ಒಂದು ಮನೋಲ್ಲಾಸ ಎಂದು ಭಾವಿಸಿದ್ದೇನೆ ಎಂಬ ಘೋಷಣೆಗೆ ಒಲಂಪಿಕ್ ಕ್ರೀಡಾಪಟುಗಳು ಬದ್ಧರಾಗಿರಬೇಕು. ಆನಂದ ವಿನೋದಗಳಿಗಾಗಿ ಚಲನೆಯಲ್ಲಿ ಪಟುತ್ವ, ಸಂಪಾದನೆಗಾಗಿ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಕ್ರೀಡೆ ಮೈಮನಸ್ಸುಗಳಿಗೆ ಮುದ ಕೊಡುತ್ತವೆ, ಉಲ್ಲಾಸ, ನೀಡುತ್ತವೆ. ದೈಹಿಕ ಬೆಳವಣಿಗೆಗೆ ಕ್ರೀಡೆ ಪೂರಕವಾಗಿ ಸಹಕಾರಿಯಾಗಿವೆ.

ವೇದ ಮತ್ತು ಪುರಾಣ ಕಾಲದಿಂದಲೂ ಭಾರತದಲ್ಲಿ ಕ್ರೀಡಾ ಸಂಪ್ರದಾಯ ಬೆಳೆದು ಬಂದಿದೆ. ಅಂದು ಬಾಣ ಪ್ರಯೋಗ, ಭರ್ಜಿ ಎಸೆತ, ಕುದುರೆ ಸವಾರಿ, ರಥಸ್ಪರ್ಧೆ, ಪಗಡೆಯಾಟ, ಕುಸ್ತಿ, (ಜಟ್ಟಿಯುದ್ಧ) ಮೊದಲಾದ ಆಟಗಳು ಆರ್ಯರ ಕಾಲದಲ್ಲಿ ರೂಢಿಯಲ್ಲಿದ್ದವು. ಅಂದು ಇವೆಲ್ಲಾ ಸ್ಪರ್ಧಾ ರೂಪದಲ್ಲಿದ್ದವು. ಯೋಗಾಸನ, ಪ್ರಾಣಾಯಾಮ, ಸೂರ್ಯನ ನಮಸ್ಕಾರಗಳು ಇತ್ಯಾದಿ ಆರ್ಯರ ಕಾಲದ ಶಾರೀರಿಕ ಚಟುವಟಿಕೆಗಳಾಗಿದ್ದವು. ಪುರಾಣ ಕಾಲದಲ್ಲಿ ಅರ್ಜುನ, ರಾಮ, ಲಕ್ಷö್ಮಣ, ಭೀಮ, ದುರ್ಯೋಧನ, ಜರಾಸಂಧ, ಕಂಸ ಇವರೆಲ್ಲಾ ಧನುರ್ವಿದ್ಯೆಯಲ್ಲಿ ಹಾಗೂ ಬಾಹುಬಲಗಳಿಗೆ ಹೆಸರಾದವರು ಅನೇಕಾನೇಕ ಸ್ಪರ್ಧೆ ಯುದ್ಧಗಳನ್ನು ಜಯಿಸಿದವರು. ಇಟ್ಟ ಗುರಿಯನ್ನು ತಪ್ಪದವರು, ಹಾಕಿದ ಪಟ್ಟನ್ನು ಬಿಡದವರು, ಬಲವಾದ ದೇಹದಾರ್ಢ್ಯ ಹೊಂದಿದವರು.

ಹರಪ್ಪಾ ಮೊಹೆಂಜಾದಾರೋ ಸಂಸ್ಕೃತಿಯ ಕಾಲದಲ್ಲಿ ಈಜು ಒಂದು ಜನಪ್ರಿಯ ಕ್ರೀಡೆಯಾಗಿತ್ತು. ಅಲ್ಲಿ ಕಂಡು ಬಂದಿರುವ ಈಜು ಕೊಳಗಳೇ ಅದಕ್ಕೆ ಸಾಕ್ಷಿ, ಈಜು ಸ್ಪರ್ಧೆಗಳು ಅಂದು ನಡೆಯುತ್ತಿದ್ದವು. ಈಜು ಸ್ಪರ್ಧೆಗಳು ಅಲ್ಲಿ ನಡೆಯುವಾಗ ಕೊಳದ ಸುತ್ತಲೂ ಜನರು ಕುಳಿತು ನೋಡಿ ಆನಂದಿಸುತ್ತಿದ್ದರು. ತಕ್ಷಶಿಲಾ, ನಲಂದಾ ಪ್ರಾಚೀನ ವಿಶ್ವವಿದ್ಯಾಲಯಗಳ ಆವರಣದಲ್ಲಿ ದೊಡ್ಡ ಕ್ರೀಡಾಂಗಣಗಳಿದ್ದವು. ಅಲ್ಲಿ ಓಟ, ಭರ್ಜಿ ಎಸೆತ, ಕುಸ್ತಿ, ಮುಷ್ಟಿ ಕಾಳಗ, ಕಹಳೆ ಊದುವುದು, ಚೆಂಡಾಟ, ರಥಸ್ಪರ್ಧೆ, ಕತ್ತಿವರಸೆ, ಕುದುರೆ ಸವಾರಿ ಕ್ರೀಡೆಗಳಿಗೆ ಪ್ರೋತ್ಸಾಹವಿತ್ತು. ಭಾರ ಎತ್ತುವುದು, ಚಕ್ರ ಎಸೆತ, ಗದೆ ತಿರುಗಿಸುವುದು, ಮಲ್ಲಕಂಬ ಇತ್ಯಾದಿ ಕ್ರೀಡೆಗಳು ಈ ವಿಶ್ವ ವಿದ್ಯಾಲಯಗಳ ಪ್ರಾಂಗಣದಲ್ಲಿ ನಡೆಯುತ್ತಿದ್ದವು.

ರಜಪೂತರು ಕುದುರೆ ಓಟ, ಬೇಟೆ, ಕುದುರೆ ಮೇಲೆ ಕುಳಿತು ಓಕುಳಿ ಎರಚುವುದು ಇತ್ಯಾದಿ ಕ್ರೀಡೆಗಳಲ್ಲಿ ನಿರತರಾಗುತ್ತಿದ್ದರು. ಆನೆಗಳ ಸವಾರಿ ಸ್ಪರ್ಧೆಗಳು ನಡೆಯುತ್ತಿದ್ದವು. ಕತ್ತಿಯುದ್ಧ, ರಥ ಸವಾರಿ, ಧನುರ್ವಿದ್ಯೆ ಸ್ಪರ್ಧೆಗಳು ನಡೆಯುತ್ತಿದ್ದವು.

ಕುಸ್ತಿ, ಮುಷ್ಟಿ, ಜಟ್ಟಿ ಕಾಳಗವು ನಡೆಯುತ್ತಿದ್ದವು. ಮುಸಲ್ಮಾನರು ಬಂದು ಆಳಿದ ಕಾಲದಲ್ಲಿ ಕುಸ್ತಿ, ಮುಷ್ಟಿ ಕಾಳಗ, ಈಗಿನ ಪೋಲೋ ಆಟವನ್ನು ‘ಚೌಗನ್, ಕವಟೆಯಾಟ’ ಪ್ರಸಿದ್ಧವಾಗಿದ್ದವು. ಬ್ರಿಟೀಷರ ಕಾಲದಲ್ಲಿ ಆಧುನಿಕ ಕ್ರೀಡಾ ಚಟುವಟಿಕೆಗಳು ಭಾರತದ ಶಾಲೆ, ಕಾಲೇಜುಗಳಲ್ಲಿ ರೂಡಿಗೆ ಬಂದವು. ಕ್ರಿಕೆಟ್, ಫುಟ್‌ಬಾಲ್, ಹಾಕಿ ಕಲಿಸಲ್ಪಟ್ಟವು, ಆಟೋಟ ಸ್ಪರ್ಧೆಗಳು ಬೆಳೆಯ ಲಾರಂಭಿಸಿದವು. ಭಾರತದಲ್ಲಿ ಸ್ವಾತಂತ್ರö್ಯದ ನಂತರ ಎಲ್ಲಾ ಬಗೆಯ ಕ್ರೀಡಾ ಚಟುವಟಿಕೆ ಗಳಿಗೂ ಪ್ರೋತ್ಸಾಹ ದೊರೆಯಿತು. ಪ್ರಾಚೀನ ಕಾಲದ ಕ್ರೀಡೆ, ಆಟೋಟಗಳು ನಿಯಮಾವಳಿಗಳ ರೂಪುರೇಷೆಗಳೊಡನೆ ಹೊಸ ರೂಪ ಪಡೆದು ಕ್ರೀಡೆ ವಿಸ್ತಾರವಾಗಿ ಅನೇಕ ಕ್ರೀಡೆಗಳೊ ಡನೆ ಬೃಹತ್ ಗಾತ್ರದಲ್ಲಿ ಬೆಳೆಯಿತು. ಯುರೋಪಿನಲ್ಲಿ ಮಧ್ಯಯುಗದಲ್ಲಿ ಊಳಿಗಮಾನ್ಯ ದೊರೆಗಳ ನಿಯಂತ್ರಣದಲ್ಲಿ ಕ್ರೀಡಾ ಚಟುವಟಿಕೆಗಳು ನಡೆಯುತ್ತಿದ್ದವು. ಅಂದು ಬಹಳಷ್ಟು ಕ್ರೀಡೆಗಳು ಪ್ರಾಚೀನತೆಯಿಂದ ಹೊಸರೂಪವನ್ನು ಪಡೆಯ ಲಾರಂಭಿಸಿದವು. ಮಾನವನ ಜೀವನವಶ್ಯಕತೆಗಾಗಿದ್ದ ದೈಹಿಕ, ಮಾನಸಿಕ ಚಟುವಟಿಕೆಗಳು ಮಾನವನ ಆರೋಗ್ಯ ಮತ್ತು ದೈಹಿಕ ದಾರ್ಢ್ಯತೆ ದೃಷ್ಟಿಯಿಂದ ಉಳಿಸಿಕೊಳ್ಳುವ ಸಲುವಾಗಿ ಕ್ರೀಡಾ ಸ್ವರೂಪ ನೀಡಿ ಆ ಚಟುವಟಿಕೆಗಳನ್ನು ಉಳಿಸಿಕೊಳ್ಳಲಾಯಿತು. ಅಂದು ಯುರೋಪ್‌ನಲ್ಲಿ ನಡೆದ ಕೈಗಾರಿಕಾ ಕ್ರಾಂತಿಯಿAದ ಕ್ರೀಡೋತ್ಸವಗಳಿಗೆ ಪ್ರೋತ್ಸಾಹ ದೊರೆತು ಬೆಳವಣಿಗೆಯಾಯಿತು. ಯಂತ್ರಗಳಿAದ ವಿರಾಮದೊರೆತೊಡನೆ ಕಾಲ ಕಳೆಯಲು ಕ್ರೀಡಾ ಮನೋರಂಜನಾ ಚಟುವಟಿಕೆಗಳು ಹೆಚ್ಚಿದವು.

ಹಿಂದೆ ಒಂದು ಕಾಲದಲ್ಲಿ ನಿರ್ದಿಷ್ಟ ದೊರೆ ಗಳಿಗೆ ಮೀಸಲಾಗಿದ್ದ ಕೆಲವು ಕ್ರೀಡೆಗಳು ಈಗ ಎಲ್ಲಾ ಕಡೆ ಹರಡಿದೆ. ಸಾರಿಗೆ ಸಂಪರ್ಕ ಅನುಕೂಲವಿರುವುದರಿಂದ ಒಂದೆಡೆ ಹೆಚ್ಚು ಮೆಚ್ಚುಗೆಯಾದ ಆಟ ಬಹುಬೇಗ ಅಂತರರಾಷ್ಟಿçÃಯ ಮಟ್ಟದ ಆಟವಾಗಲು ಅವಕಾಶವಿದೆ.

ಕೊಡಗಿನ ಪ್ರಾಚೀನ ಕಾಲದ ಆಟಗಳು: ಕೊಡಗಿನಲ್ಲಿ ಬೇಟೆ ಹಿಂದೆ ಬಹು ಜನಪ್ರಿಯವಾಗಿತ್ತು. ಕ್ರಮೇಣ ಕೋವಿ ಬಳಕೆಯಿಂದ ಗುರಿ ಇಡುವ ಆಟಗಳು, ಹಲವು ಜಾನಪದ ಆಟಗಳು, ನೃತ್ಯ ಸ್ಪರ್ಧೆಗಳು ಮುಂತಾದವು ಕ್ರೀಡಾ ರೂಪದಲ್ಲಿದ್ದು, ಕ್ರಮೇಣ ಬೆಳೆದು ಬಂದವು. ಕತ್ತಿವರಸೆ, ಕುದುರೆ ಸವಾರಿ ಮುಂತಾದವು ಕೊಡಗಿನಲ್ಲಿ ಪ್ರಾಚೀನ ಕಾಲದಲ್ಲಿ ಇದ್ದವು.

ಈಗಿನ ಎಲ್ಲಾ ಕ್ರೀಡೆಗಳು ಪ್ರಾಚೀನ ಕ್ರೀಡೆಗಳ ಮಹತ್ವವನ್ನು ಉಳಿಸುವ ದೃಷ್ಟಿಯಿಂದಲೇ ಬೆಳೆದು ಬಂದಿವೆ. ಇಂದು ಕ್ರೀಡೆಗಳು ಪ್ರಾಚೀನ ಕ್ರೀಡೆ ಗಳಂತೆ ಮಾನವನ ಆರೋಗ್ಯ ದೈಹಿಕ ಶಕ್ತಿಯನ್ನು ಕಾಪಾಡಿ ಆತನಿಗೆ ಮನೋರಂಜನೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿವೆ.

- ಹರೀಶ್ ಸರಳಾಯ, ಮಡಿಕೇರಿ. ಮೊ: ೯೭೩೧೮೧೦೨೫೦