ಚುನಾವಣೋತ್ತರ ಸಮೀಕ್ಷೆ : ಕಾಂಗ್ರೆಸ್ಗೆ ಹೆಚ್ಚು ಸೀಟ್, ಅತಂತ್ರ ವಿಧಾನಸಭೆ ಸುಳಿವು
ಬೆಂಗಳೂರು, ಮೇ ೧೦: ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪೂರ್ಣಗೊಂಡಿದ್ದು, ತಾ. ೧೩ ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಬಹುತೇಕ ಮಂದಿ ಕಾಯುತ್ತಿದ್ದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಹಿಂದೆಯೇ ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಹೇಳಿದಂತೆ ಅತಂತ್ರ ವಿಧಾನಸಭೆಯ ಸುಳಿವನ್ನು ನೀಡಿದೆ. ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಸರ್ವ ಪ್ರಯತ್ನ ನಡೆಸಿದ್ದು, ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಕೂಡ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿತ್ತು. ಇದೀಗ ಸೀವೋಟರ್ ಚುನಾವಣೋತ್ತರ ಸಮೀಕ್ಷೆಯು ಲಭ್ಯವಾಗಿದ್ದು, ಕಾಂಗ್ರೆಸ್ಗೆ ಸಿಹಿ ಸುದ್ದಿಯನ್ನು ನೀಡಿದೆ. ಆದರೆ, ಯಾವ ಪಕ್ಷಕ್ಕೂ ಬಹುಮತ ಬಾರದಿರುವುದು ಕೊಂಚ ನಿರಾಸೆಯಾಗಿ ಪರಿಣಮಿಸಿದೆ. ಸಿ ವೋಟರ್ ಸಮೀಕ್ಷೆಯಲ್ಲಿ ಬಿಜೆಪಿ- ೮೩-೯೫, ಕಾಂಗ್ರೆಸ್- ೧೦೦-೧೧೨, ಜೆಡಿಎಸ್- ೨೧-೨೯, ಇತರೆ- ೦೨-೦೬, ರಿಪಬ್ಲಿಕ್ ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಬಿಜೆಪಿ- ೮೫-೧೦೦, ಕಾಂಗ್ರೆಸ್- ೯೪-೧೦೮, ಜೆಡಿಎಸ್- ೨೪-೩೨, ಇತರೆ- ೦೨-೦೬, ಜೀ ನ್ಯೂಸ್ ಎಕ್ಸಿಟ್ ಪೋಲ್ನಲ್ಲಿ ಬಿಜೆಪಿ - ೭೯-೯೪, ಕಾಂಗ್ರೆಸ್ - ೧೦೩-೧೧೮, ಜೆಡಿಎಸ್- ೨೫-೩೩, ಇತರೆ ೦೨-೦೫, ನ್ಯೂಸ್ ನೇಷನ್ಸ್-ಸಿಜಿಎಸ್ ಸಮೀಕ್ಷೆಯಲ್ಲಿ ಬಿಜೆಪಿ- ೧೧೪, ಕಾಂಗ್ರೆಸ್- ೮೬, ಜೆಡಿಎಸ್- ೨೧, ಇತರೆ- ೦೩, ಸುವರ್ಣ ನ್ಯೂಸ್ ತನ್ನ ಸಮೀಕ್ಷೆಯಲ್ಲಿ ಬಿಜೆಪಿ- ೯೪-೧೧೭, ಕಾಂಗ್ರೆಸ್- ೯೧-೧೦೬, ಜೆಡಿಎಸ್- ೧೪-೨೪, ಇತರೆ- ೨-೬ ಸ್ಥಾನಗಳು ಗೆಲ್ಲಲಿವೆ ಎಂದು ತಿಳಿಸಿದೆ.
ಮತಯಂತ್ರ ಧ್ವಂಸ - ಮತದಾರರ ಆಕ್ರೋಶ
ಬೆಂಗಳೂರು, ಮೇ ೧೦: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬುಧವಾರ ನಡೆದ ಮತದಾನದ ವೇಳೆ ಕನಿಷ್ಠ ಮೂರು ಸ್ಥಳಗಳಲ್ಲಿ ಹಿಂಸಾತ್ಮಕ ಘಟನೆಗಳು ವರದಿಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಅಧಿಕಾರಿಗಳು ಇವಿಎಂ ಬದಲಾಯಿಸುತ್ತಿದ್ದಾರೆ ಮತ್ತು ಮತದಾನ ಮುಗಿದಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಲೆಕ್ಟಾçನಿಕ್ ಮತಯಂತ್ರ, ವಿವಿಪ್ಯಾಟ್ (ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳನ್ನು ಧ್ವಂಸಗೊಳಿಸಿದ್ದು, ಮತಗಟ್ಟೆ ಅಧಿಕಾರಿಗಳ ವಾಹನಗಳಿಗೆ ಹಾನಿ ಮಾಡಿದ್ದಾರೆ. ಹೆಚ್ಚುವರಿ ಇವಿಎಂ ಮತ್ತು ವಿವಿಪ್ಯಾಟ್ಗಳನ್ನು ಕಾರಿನಲ್ಲಿ ಸಾಗಿಸಲಾಗುತ್ತಿದ್ದಾಗ ಗ್ರಾಮಸ್ಥರು ಕಾರನ್ನು ತಡೆದಿದ್ದಾರೆ. ಆಕ್ರೋಶಗೊಂಡು ಇವಿಎಂಗಳನ್ನು ಒಡೆದು ಹಾಕಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಸಂಬAಧ ೨೦-೨೫ ಮಂದಿಯನ್ನು ವಶಕ್ಕೆ ಪಡೆದಿದ್ದು, ಮತದಾನ ನಡೆಯುವಂತೆ ನೋಡಿಕೊಂಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಪಾಪಯ್ಯ ಗಾರ್ಡನ್ನಲ್ಲಿರುವ ಮತಗಟ್ಟೆಯೊಂದರಲ್ಲಿ ಕೆಲ ಯುವಕರು ಕೋಲು ಹಿಡಿದು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, ಬಳ್ಳಾರಿ ಜಿಲ್ಲೆಯ ಸಂಜೀವರಾಯನ ಕೋಟೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಚಿಂಚೋಳಿಯಿAದ ವಿಜಯನಗರಕ್ಕೆ ಕರೆತಂದ ನಕಲಿ ಮತದಾರರು
ಬೆಳಗಾವಿ, ಮೇ ೧೦: ನಕಲಿ ಮತದಾನ ಮಾಡಲು ವಿಜಯಪುರಕ್ಕೆ ಬಂದಿದ್ದ ಚಿಂಚೋಳಿ ಗ್ರಾಮದ ಅಪಾರ ಸಂಖ್ಯೆಯ ಜನರು ವಿಜಯಪುರ ನಗರದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರು ಕರೆತಂದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಹಲವಾರು ನಕಲಿ ಮತದಾರರು ತಾವು ಮತದಾನ ಮಾಡಲು ಚಿಂಚೋಳಿಯಿAದ ವಿಜಯಪುರಕ್ಕೆ ಬಸ್ಗಳಲ್ಲಿ ಬಂದಿರುವುದಾಗಿ ಒಪ್ಪಿಕೊಂಡಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿನ್ನೆ ರಾತ್ರಿ ವಿಜಯಪುರ ನಗರಕ್ಕೆ ಅವರನ್ನು ಕರೆತಂದು ವಿಜಯಪುರ ನಗರದಲ್ಲಿ ತಂಗುವAತೆ ಮಾಡಲಾಗಿತ್ತು ಎಂದು ಒಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ
ಮಂಗಳೂರು, ಮೇ ೧೦: ಮಂಗಳವಾರ ರಾತ್ರಿ ಮಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿಎ ಮೊಹಿಯುದ್ದೀನ್ ಬಾವಾ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜೆಡಿಎಸ್ ಕಾರ್ಯಕರ್ತರು ಪ್ರತಿದೂರು ದಾಖಲಿಸಿದ್ದಾರೆ. ಮತ್ತು ಪ್ರತಿದೂರು ದಾಖಲಾಗಿದೆ. ಘರ್ಷಣೆಯಲ್ಲಿ ಗಾಯಗೊಂಡ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರಾದ ನಿಜಾಮ್ ಮತ್ತು ಹಷರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತದಾರರಿಗೆ ಹಂಚಲು ಜೆಡಿಎಸ್ ಅಭ್ಯರ್ಥಿ ಕಾರಿನಲ್ಲಿ ಹಣ ತಂದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿದ್ದು ಎರಡು ಗುಂಪುಗಳ ನಡುವಿನ ವಾಗ್ವಾದಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ. ನಂತರ ಎರಡೂ ಗುಂಪುಗಳು ಬಜ್ಪೆ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ, ಅಲ್ಲಿ ಅಭ್ಯರ್ಥಿಯ ಎದುರೇ ಬಾವಾ ಬೆಂಬಲಿಗರು ನಿಜಾಮ್ ಮತ್ತು ಹಶರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಬಲಗೈ ಬೆರಳಿಗೆ ಶಾಯಿ
ಮೈಸೂರು, ಮೇ ೧೦: ವರುಣಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ ಅವರು ಮತ ಚಲಾಯಿಸಿದ್ದು, ಈ ವೇಳೆ ಚುನಾವಣಾ ಸಿಬ್ಬಂದಿ ಅವರ ಬಲಗೈ ಬೆರಳಿಗೆ ಶಾಯಿ ಹಾಕಿದ್ದಾರೆ. ಇಂದು ಮಾಜಿ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಮತದಾನ ಮಾಡಿದ್ದು, ಈ ವೇಳೆ ಅಳಿಸಲಾಗದ ಶಾಯಿಯನ್ನು ಅವರ ಬಲಗೈ ಬೆರಳಿಗೆ ಶಾಯಿ ಹಾಕಿದ್ದಾರೆ. ಆದರೆ ಸಿದ್ದರಾಮಯ್ಯ ಜೊತೆಯಲ್ಲಿ ಬಂದಿದ್ದ ಅವರ ಪುತ್ರ ಡಾ. ಯತೀಂದ್ರ ಮತ್ತು ಸೊಸೆ ಸ್ಮಿತ ರಾಕೇಶ್ ಅವರಿಗೆ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗಿದ್ದು, ಸಿದ್ದರಾಮಯ್ಯ ಅವರಿಗೆ ಬಲಗೈ ಬೆರಳಿಗೆ ಹಾಕಲಾಗಿದೆ. ಮೈಸೂರು ನಗರದಿಂದ ಬೆಳಿಗ್ಗೆ ೧೦ ಗಂಟೆಗೆ ಸಿದ್ದರಾಮನ ಹುಂಡಿಗೆ ಆಗಮಿಸಿದ್ದ ಸಿದ್ದರಾಮಯ್ಯ ತಮ್ಮ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ಸೊಸೆ ಸ್ಮಿತಾ ರಾಕೇಶ್ ಜತೆಗೂಡಿ ಮತದಾನ ಮಾಡಿದರು. ಇದಕ್ಕೂ ಮೊದಲು ಗುರುತಿನ ಚೀಟಿ ಪರಿಶೀಲಿಸಿ, ಶಾಯಿ ಹಾಕುವಾಗ ಸಿಬ್ಬಂದಿ ಡಾ. ಯತೀಂದ್ರ ಮತ್ತು ಸ್ಮಿತ ರಾಕೇಶ್ ಅವರಿಗೆ ಎಡಗೈ ಬೆರಳಿಗೆ ಶಾಯಿ ಹಾಕಿದರು. ಆದರೆ ಸಿದ್ದರಾಮಯ್ಯ ಅವರಿಗೆ ಬಲಗೈ ಬೆರಳಿಗೆ ಶಾಯಿ ಹಾಕಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಶಿಷ್ಠಾಚಾರದಂತೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಬೇಕು.. ಒಂದು ವೇಳೆ ಬೇರಾವುದೇ ಚುನಾವಣೆಗಳಿಂದ ಮತದಾರ ಮತದಾನ ಮಾಡಿದಾಗ ಶಾಯಿ ಹಾಕಿದ್ದರೆ ಆಗ ಮಾತ್ರ ಬೇರೆ ಬೆರಳಿಗೆ ಶಾಯಿ ಹಾಕಲಾಗುತ್ತದೆ.
ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸರ್ಕಾರ ಮುಂದು
ಗುವಾಹಟಿ, ಮೇ ೧೦: ಬಹುಪತ್ನಿತ್ವವನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವಿದೆಯೇ? ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಸಮಿತಿಯು ಕಾನೂನು ತಜ್ಞರನ್ನು ಹೊಂದಿರಲಿದ್ದು, ಏಕರೂಪ ನಾಗರಿಕ ಸಂಹಿತೆಗಾಗಿ ರಾಜ್ಯ ನೀತಿಯ ನಿರ್ದೇಶನ ತತ್ವಕ್ಕೆ ಸಂಬAಧಿಸಿದAತೆ ದೇಶದ ಸಂವಿಧಾನದ ೨೫ನೇ ವಿಧಿಯೊಂದಿಗೆ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಕಾಯಿದೆ, ೧೯೩೭ ರ ನಿಬಂಧನೆಗಳನ್ನು ಪರಿಶೀಲನೆ ನಡೆಸುತ್ತದೆ. ಅಸ್ಸಾಂನಲ್ಲಿ ಬಹುಪತ್ನಿತ್ವದ ಪ್ರಮಾಣ ಎಷ್ಟಿದೆ ಎಂಬ ಬಗ್ಗೆ ಹಿಮಂತ ಬಿಸ್ವ ಶರ್ಮಾ ಅಂಕಿ-ಅAಶಗಳನ್ನು ಬಹಿರಂಗಪಡಿಸಿಲ್ಲವಾದರೂ, ದಕ್ಷಿಣ ಅಸ್ಸಾನ ಬರಕ್ ಕಣಿವೆ ಹಾಗೂ ಕೇಂದ್ರ ಅಸ್ಸಾಂನಲ್ಲಿ ಹಲವು ಪ್ರಕರಣಗಳಿದ್ದು, ದೇಶೀಯ ಮುಸ್ಲಿಮರಲ್ಲಿ ಹಾಗೂ ಶಿಕ್ಷಣವಿರುವವರಲ್ಲಿ ಬಹುಪತ್ನಿತ್ವ ಇಲ್ಲವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ ಎಂದು ಸಿಎಂ ಹೇಳಿದ್ದಾರೆ.