ಕುಶಾಲನಗರ, ಮೇ ೧೦: ಮಡಿಕೇರಿ ಕ್ಷೇತ್ರ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಎಂದು ಬಿಂಬಿತವಾಗಿದ್ದರು, ಕೊನೆ ಕ್ಷಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಎಂಬAತೆ ಕಂಡು ಬಂತು.
ಮಂಗಳವಾರ ರಾತ್ರಿಯಿಂದ ಜೆಡಿಎಸ್ ಅಭ್ಯರ್ಥಿಯ ಪ್ರಚಾರದ ಅಬ್ಬರ ಏಕಾಏಕಿ ಮಾಯವಾದಂತೆ ಗೋಚರಿಸಿತ್ತು. ಕುಶಾಲನಗರ ತಾಲೂಕು ವ್ಯಾಪ್ತಿಯ ಬಹುತೇಕ ಮತಗಟ್ಟೆಗಳ ಹೊರ ಆವರಣದಲ್ಲಿ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಪರ ಕಾರ್ಯಕರ್ತರ ಪ್ರಚಾರ ಕಂಡು ಬರಲಿಲ್ಲ. ಕೆಲವು ಮತಗಟ್ಟೆಗಳ ಹೊರಭಾಗದಲ್ಲಿ ಬೆಳ್ಳಂಬೆಳಗ್ಗೆ ಜೆಡಿಎಸ್ ಪರ ಕಾರ್ಯಕರ್ತರು ಕಂಡುಬAದರಾದರೂ ಸಮಯ ಕಳೆದಂತೆ ಪಕ್ಷದ ಶಲ್ಯಗಳು ದಿಢೀರನೆ ಮಾಯವಾದವು. ಕೆಲವರು ಕಾಂಗ್ರೆಸ್ ಶಲ್ಯ ಧರಿಸಿದ್ದು, ಇನ್ನು ಕೆಲವರು ಬಿಜೆಪಿ ಗುಂಪಿನಲ್ಲಿ ಸೇರಿಕೊಂಡಿದ್ದುದು ಕಂಡುಬAತು.
ಕೆಲವು ಗುಂಪುಗಳಲ್ಲಿ ಜೆಡಿಎಸ್ ಅಭ್ಯರ್ಥಿ ನಾಟ್ ರೀಚಬಲ್ ಅನ್ನುವ ಸಂದೇಶಗಳು ಹೊರಬೀಳಲು ಆರಂಭಿಸಿದವು. ಬೆಳಿಗ್ಗೆ ೭ ಗಂಟೆ ೧೦ ನಿಮಿಷಕ್ಕೆ ಸಿದ್ದಲಿಂಗಪುರದ ಮತಗಟ್ಟೆಯಲ್ಲಿ ಮತದಾನ ಮಾಡಿದ ಪಕ್ಷದ ಅಭ್ಯರ್ಥಿ ನಂತರ ಯಾರಿಗೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನುವ ಮಾಹಿತಿಗಳು ಹೊರ ಬೀಳಲಾರಂಭಿಸಿದವು. ಕಳೆದ ಒಂದು ತಿಂಗಳಿನಿAದ ಸದಾ ಬ್ಯುಸಿಯಾಗಿದ್ದ ವ್ಯಾಟ್ಸಪ್ ಗುಂಪುಗಳಲ್ಲಿ ರವಾನೆ ಆಗುತ್ತಿದ್ದ ಜೆಡಿಎಸ್ ಪಕ್ಷದ ಸಂದೇಶಗಳು ಕೂಡ ಏಕಾಏಕಿ ಸ್ಥಗಿತಗೊಂಡವು. ಕುಶಾಲನಗರ ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಜೆಡಿಎಸ್ ಪರ ಪ್ರಚಾರ ಮಾಡುವ ಕಾರ್ಯಕರ್ತರು ತಮ್ಮ ಮತ ಚಲಾಯಿಸಿ ತಮ್ಮ ಸ್ವಂತ ಕಾಯಕದಲ್ಲಿ ತೊಡಗಿಕೊಂಡಿದ್ದು ಕಂಡು ಬಂತು. -ಸಿಂಚು