ಸುಪ್ರೀಂ ಕೋರ್ಟ್ ಆದೇಶ

ಮಡಿಕೇರಿ, ಮೇ ೧೦: ದೇಶದ ಸಹಕಾರಿ ಕ್ರೆಡಿಟ್ ಸೊಸೈಟಿಗಳಿಗೆ ಈ ಹಿಂದೆ ಇದ್ದ ಆದಾಯ ತೆರಿಗೆ ವಿನಾಯಿತಿ ಸೌಲಭ್ಯ ಮುಂದುವರಿಯುವAತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ. ಸೆಕ್ಷನ್ ೮೦P (೨) ಅಡಿಯಲ್ಲಿ ಸಹಕಾರಿ ಕ್ರೆಡಿಟ್ ಸೊಸೈಟಿಗಳನ್ನು ಬ್ಯಾಂಕ್‌ಗಳಾಗಿ ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಅವುಗಳಿಗೆ ಆದಾಯ ತೆರಿಗೆ ವಿನಾಯಿತಿ ಇದ್ದು, ಅದೇ ಪ್ರಕಾರ ಮುಂದುವರೆಯಲಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಇಂತಹ ಕ್ರೆಡಿಟ್ ಸೊಸೈಟಿಗಳನ್ನು ಆದಾಯ ತೆರಿಗೆ ಮಿತಿಗೆ ತರುವಂತೆ ಪ್ರಿನ್ಸಿಪಲ್ ಕಮಿಷನರ್‌ನ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಸದರಿ ಕ್ರೆಡಿಟ್ ಸೊಸೈಟಿಗಳು ಸಾಲ/ಕ್ರೆಡಿಟ್‌ಗಳ ವಿತರಣಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವುದರಿAದ ೧೯೬೧ ರ ಆದಾಯ ತೆರಿಗೆ ನಿಯಮದ ಪ್ರಕಾರ ಆದಾಯ ತೆರಿಗೆಗೆ ಇವುಗಳು ಒಳಪಡುವುದಿಲ್ಲ. ಕ್ರೆಡಿಟ್ ಸೊಸೈಟಿಗಳು ಕೇವಲ ಸೊಸೈಟಿಗಳ ಸದಸ್ಯರಿಗೆ ಕ್ರೆಡಿಟ್ ನೀಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತವೆ. ಇದಕ್ಕೆ ಹೋಲಿಸಿದರೆ ಬ್ಯಾಂಕಿAಗ್ ರೆಗ್ಯುಲೇಷನ್ ಆ್ಯಕ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್‌ಗಳು ಬ್ಯಾಂಕಿAಗ್ ಸೇವೆಗಳೊಂದಿಗೆ ಕ್ರೆಡಿಟ್‌ಅನ್ನು ಸಾರ್ವಜನಿಕರಿಗೂ ನೀಡುತ್ತದೆ. ಇವೆರಡಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ. ಆದುದರಿಂದ ಕ್ರೆಡಿಟ್ ಸೊಸೈಟಿಗಳನ್ನು ಬ್ಯಾಂಕ್ ಎಂದು ಪರಿಗಣಿಸಲಾಗುವುದು ಅಸಾಧ್ಯವಾಗಿರುವುದರಿಂದ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.