ಗೋಣಿಕೊಪ್ಪ ವರದಿ, ಮೇ ೧೦: ಎನ್‌ಸಿಸಿ ಮಡಿಕೇರಿ ೧೯ ಕರ್ನಾಟಕ ಬೆಟಾಲಿಯನ್ ವತಿಯಿಂದ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ತರಬೇತಿ ಶಿಬಿರ ಬುಧವಾರ ಸಮಾರೋಪಗೊಂಡಿತು.

ಏಪ್ರಿಲ್ ೨೪ ರಿಂದ ಮೇ ೩ ರವರೆಗೆ ನಡೆದ ಶಿಬಿರದಲ್ಲಿ ಕೊಡಗು, ಪುತ್ತೂರು, ಸುಳ್ಯ ಭಾಗದ ಕಾಲೇಜು ಮತ್ತು ಪ್ರೌಢಶಾಲೆಯ ಸುಮಾರು ೫೨೦ ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.

ಕಾವೇರಿ ಕಾಲೇಜು ಫೈರ್ ರೇಂಜ್‌ನಲ್ಲಿ ಕೆಡೆಟ್‌ಗಳಿಗೆ ಫೈರಿಂಗ್ ತರಬೇತಿ ನೀಡಲಾಯಿತು. ಕಾಪ್ಸ್ ಆವರಣದಲ್ಲಿ ಉಳಿದ ಚಟುವಟಿಕೆಗಳು ನಡೆದವು. ಆರ್.ಡಿ. ಆಯ್ಕೆಗೆ ಪೂರಕ ತರಬೇತಿ, ತಾಲ್ಸೇನಾ ತರಬೇತಿ, ಮ್ಯಾಪ್ ರೀಡಿಂಗ್, ಜಡ್ಜಿಂಗ್, ಡ್ರಿಲ್, ವೆಪನ್ ಡ್ರಿಲ್, ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ರಂಜಿಸಿದರು.

ತಾಲ್ಸೇನಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಪ್ರಜ್ವಲ್ ಅಯ್ಯಪ್ಪ, ಎಂ.ಆರ್. ಅನನ್ಯ, ಕೃತಿ, ಐಡಿಸಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಸಾಹಿತಿ, ಆರ್‌ಡಿಸಿ ಶಿಬಿರದಲ್ಲಿ ಭಾಗವಹಿಸಿದ್ದ ದೇವಿಕಾ ಅವರುಗಳನ್ನು ಸನ್ಮಾನಿಸಲಾಯಿತು.

ಕರ್ನಲ್ ಗಿಲ್ಬರ್ಟ್ ಅರ್ಹಾನಾ, ಲೆ. ಕ. ಚಾಕೋ, ಮೇ. ಮಲ್ಲಿಕಾರ್ಜುನ್, ಲೆ. ಅತುಲ್ ಶೆಣೈ, ಎನ್‌ಸಿಸಿ ಅಧಿಕಾರಿಗಳಾದ ಲೆ. ಐ.ಡಿ. ಲೇಪಾಕ್ಷಿ, ಲೆ. ಅರುಣ್‌ಕುಮಾರ್ ತಿವಾರಿ, ಕ್ಯಾ. ಗಣೇಶ್, ಚೆಕ್ಕೇರ ಆದರ್ಶ್, ಕೇರ್ ಟೇಕರ್ಸ್ ಪ್ರೇಮಾ, ಕಿಶೋರ್, ವೆಂಕಟೇಶ್ ಇದ್ದರು.v