ಪೊನ್ನಂಪೇಟೆ, ಮೇ ೧೦: ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾಫಿ ಬೆಳೆಗಾರರೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.

ನಾಲ್ಕೇರಿ ಗ್ರಾಮದ ಮುಕ್ಕಾಟೀರ ದಿನೇಶ್ (೪೧) ಎಂಬವರೇ ಮೃತ ದುರ್ದೈವಿ.

ತಾ.೯ ರಂದು ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಕೆರೆಯ ಸಮೀಪ ಗದ್ದೆಯಲ್ಲಿ ಹಸುವನ್ನು ಕಟ್ಟಲು ತೆರಳಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಮಾರ್ಗದಲ್ಲಿ ಹಾದುಹೋಗಿರುವ ೧೧ ಕೆ.ವಿ. ವಿದ್ಯುತ್ ಮಾರ್ಗದ ವಿದ್ಯುತ್ ಕಂಬ ಬೀಳದಂತೆ ಕಟ್ಟಿರುವ ಗೈವಯರ್ ಮೂಲಕ ವಿದ್ಯುತ್ ಸ್ಪರ್ಶಗೊಂಡು ಈ ಘಟನೆ ನಡೆದಿದೆ. ಕಂಬದಲ್ಲಿರುವ ವಿದ್ಯುತ್ ತಂತಿ ಮತ್ತು ಗೈವಯರ್ ನಡುವಿನ ಅಂತರ ಕಡಿಮೆ ಇದ್ದ ಕಾರಣ ಹಿಡಿಯಲು ಯತ್ನಿಸಿದಾಗ ವಿದ್ಯುತ್ ಹರಿದಿರಬಹುದು ಎಂದು ಅಂದಾಜಿಸಲಾಗಿದ್ದು, ಹಸು ಅಪಾಯದಿಂದ ಪಾರಾಗಿದೆ.

ಸೆಸ್ಕ್ ನಿರ್ಲಕ್ಷ್ಯದಿಂದ ಅಪಾಯ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಗೋಣಿಕೊಪ್ಪ ಉಪ ವಿಭಾಗ ಎಇಇ ನೀಲ್‌ಶೆಟ್ಟಿ, ಜೆಇ ಹೇಮಂತ್‌ಕುಮಾರ್ ಭೆೆÃಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.