ಕರಿಕೆ, ಮೇ ೧೦: ಕರ್ನಾಟಕ ವಿಧಾನ ಸಭಾ ಚುನಾವಣಾ ಹಿನ್ನೆಲೆಯಲ್ಲಿ ಗಡಿಗ್ರಾಮ ಮುಂಡ್ರೋಟ್ ಹಾಗೂ ಕರಿಕೆ ಮತಗಟ್ಟೆಗಳಲ್ಲಿ ಮತದಾನ ಯಾವುದೇ ಅಡ್ಡಿ ಆತಂಕ ವಿಲ್ಲದೆ ನಡೆಯಿತು.
ನಕ್ಸಲ್ ಪೀಡಿತ ಮುಂಡ್ರೋಟ್ ಮತಗಟ್ಟೆಯಲ್ಲಿ ಕೇಂದ್ರೀಯ ಕೈಗಾರಿಕಾ ಮೀಸಲ ಭದ್ರತಾ ಪಡೆ ಹಾಗೂ ರಾಜ್ಯ ಶಸ್ತಾçಸ್ತç ಪಡೆ, ಅರಣ್ಯ ಇಲಾಖೆ ವತಿಯಿಂದ ಬಿಗಿ ಭದ್ರತೆ ಒದಗಿಸಲಾಗಿದ್ದು, ಒಟ್ಟಾರೆ ೪೨ ಮತಗಳಲ್ಲಿ ೩೩ ಮತ ಚಲಾವಣೆಗಯಾಗಿದ್ದು ಶೇ ೭೮.೫೭% ಮತದಾನವಾಗಿರುತ್ತದೆ.ಕರಿಕೆ ಯಲ್ಲಿ ಕೂಡ ಬೆಳಗಿನಿಂದಲೇ ಬಿರುಸಿನ ಮತದಾನ ನಡೆದಿದ್ದು ಗುಡ್ಡಗಾಡು ಪ್ರದೇಶವಾದ ಕಾರಣ ಎರಡೂ ರಾಷ್ಟಿçÃಯ ಪಕ್ಷದ ವತಿಯಿಂದ ಪ್ರತಿ ಮನೆಗಳ ಬಳಿ ತೆರಳಿ ಮತದಾರರನ್ನು ಜೀಪಿನಲ್ಲಿ ಕರೆ ತರುತ್ತಿದ್ದರು. ಇದರಿಂದಾಗಿ ಮತದಾನದ ಪ್ರಮಾಣ ಹೆಚ್ಚಾಗಿತ್ತು.