ಮಡಿಕೇರಿ, ಮೇ ೧೦: ೨೦೯ನೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವೀರಾಜಪೇಟೆ ನಗರದ ಮತಗಟ್ಟೆ ಸಂಖ್ಯೆ ೧೫೪ರಲ್ಲಿ ನೆಹರುನಗರದ ಲೋಹಿತ್, ಪೂಜಾ ಮತ್ತು ಚೈತನ್ಯ ಅವರುಗಳು ಪ್ರಥಮಬಾರಿಗೆ ಮತದಾನ ಮಾಡಿದರು. ಬಳಿಕ ಪತ್ರಿಕೆಯೊಂದಿಗೆ ಮಾತನಾಡಿ, ಪ್ರಥಮ ಬಾರಿಗೆ ಚುನಾವಣೆಯಲ್ಲಿ ಮತದಾನ ಮಾಡಿರುವುದು ಸಂತಸ ತಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ತಾವುಗಳು ಒಂದು ಭಾಗವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮತಗಟ್ಟೆ ಕೇಂದ್ರಕ್ಕೆ ಪ್ರವೇಶಕ್ಕೆ ಮೊದಲು ಮುಜುಗರವಾಗಿತ್ತು. ನಂತರದಲ್ಲಿ ಮತಗಟ್ಟೆ ಅಧಿಕಾರಿಗಳು ಹೇಳಿದಂತೆ ಮತಯಂತ್ರದಲ್ಲಿ ಗುಂಡಿ ಒತ್ತುವ ಮೂಲಕ ಅಭ್ಯರ್ಥಿಗೆ ಮತ ನೀಡಿದ್ದೇವೆ ಎಂದು ಹೇಳಿದರು.