ವೀರಾಜಪೇಟೆ, ಮೇ ೧೦: ವೀರಾಜಪೇಟೆ ವ್ಯಾಪ್ತಿಯಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ. ಎಲ್ಲಿಯೂ ಯಾವ ಅಡೆ ತಡೆಗಳಿಲ್ಲದೆ ಮತದಾನ ಸಾಗಿದ್ದು ಜನರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದಾರೆ. ವೀರಾಜಪೇಟೆ ಪಟ್ಟಣ ಹಾಗೂ ಸುತ್ತಲಿನ ಗ್ರಾಮ ಪ್ರದೇಶದಲ್ಲಿ ಬೆಳಿಗ್ಗೆಯಿಂದಲೇ ಚುರುಕಿನ ಮತದಾನ ನಡೆಯಿತು.
ಈ ಬಾರಿ ಸಂತ ಅನ್ನಮ್ಮ ಶಾಲೆಯ ವಿಶೇಷಚೇತನ ಸ್ನೇಹಿ ವಿಶೇಷ ಮತಗಟ್ಟೆ ಗಮನ ಸೆಳೆಯಿತು.
ಅಪರಾಹ್ನದ ಬಳಿಕ ಮತದಾನ ಬಹುತೇಕ ಕಡೆ ನಿಧಾನವಾಗಿ ಸಾಗಿತ್ತು. ಜಯಪ್ರಕಾಶ್ ಬಾಲಕಿಯರ ಪ್ರೌಢಶಾಲೆ ಸಖಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು ಮತ್ತು ಪಕ್ಕದ ಸರ್ವ ಶಿಕ್ಷಣ ಅಭಿಯಾನ ಇಲಾಖೆ ಕಚೇರಿ ಮತಗಟ್ಟೆಯಲ್ಲಿ ಸಾಧಾರಣ ಜನರಿದ್ದರು.
ಸಂತ ಅನ್ನಮ್ಮ ಶಾಲೆಯಲ್ಲಿ ಈ ಬಾರಿ ವಿಶೇಷವಾದ ವಿಶೇಷಚೇತನ ಸ್ನೇಹಿ ಮತಗಟ್ಟೆಯಲ್ಲಿ ಹಾಗೂ ದಖ್ಖನ್ನಿ ಮೊಹಲ್ಲದ ಮತಗಟ್ಟೆಯಲ್ಲಿ ಸಾಧಾರಣ ಮತದಾನ ನಡೆದಿತ್ತು. ಸುಂಕದಕಟ್ಟೆ ಮತ್ತು ಗೋಣಿಕೊಪ್ಪ ರಸ್ತೆಯ ಶಿಶು ವಿಹಾರ ಕೇಂದ್ರದ ಮತಗಟ್ಟೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಸಮೀಪದ ಆರ್ಜಿ ಬೇಟೋಳಿ ಬಾಳುಗೋಡು ಬಿಟ್ಟಂಗಾಲ ಕಡೆ ಸಾಧಾರಣ ಮತದಾನ ನಡೆದಿದೆ. ಕಲ್ಲುಬಾಣೆಯ ಬದ್ರೀಯ ಹಿರಿಯ ಪ್ರಾಥಮಿಕ ಕೇಂದ್ರ ಯುವ ಜನ ಸ್ನೇಹಿ ಮತಗಟ್ಟೆಯಲ್ಲಿ ಬೆಳಿಗ್ಗೆ ಸರತಿ ಸಾಲು ಕಂಡು ಬಂತು.
ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ೧೪೯ನೇ ಮತಗಟ್ಟೆಯಲ್ಲಿ ವಿಶೇ಼ಷವಾಗಿ ವಿಶೇಷಚೇತನ ಸ್ನೇಹಿ ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು. ಜೊತೆಗೆ ಇಲ್ಲಿ ಸಮೀಪದಲ್ಲಿ ವಿಶೇಷಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ವಿಶ್ರಾಂತಿ ಕೊಠಡಿಯನ್ನು ಸಹ ಸ್ಥಾಪಿಸಲಾಗಿತ್ತು.
ಆರ್ಜಿ ಗ್ರಾಮದ ಕಲ್ಲು ಬಾಣೆಯಲ್ಲಿ ಯುವ ಜನ ಸ್ನೇಹಿ ಮತಗಟ್ಟೆ ಗಮನ ಸೆಳೆಯಿತು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೭೩ ಮತದಾನ ಕೇಂದ್ರಗಳಿದ್ದು ೧,೦೯೨ ಸಿಬ್ಬಂದಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಿ ದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಒಟ್ಟು ೭೦೩ ಜನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ಚುನಾವಣೆಯ ಮತದಾನ ಸಂಬAಧ ಜಿಲ್ಲೆಯಾದ್ಯಂತ ಎಲ್ಲಾ ವಿಧದ ಮದ್ಯಗಳ ಸಾಗಾಣಿಕೆ, ಮಾರಾಟವನ್ನು ನಿಷೇಧಿಸಲಾಗಿತ್ತು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎರಡು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು ೭೫ ಮೈಕ್ರೋ ವೀಕ್ಷಕರುಗಳನ್ನು ಕ್ರಿಟಿಕಲ್ ಮತಗಟ್ಟೆಗಳಿಗೆ ನಿಯೋಜಿಸಲಾಗಿತ್ತು.
ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ-ಕಾಲೇಜುಗಳಿಗೆ, ವಿವಿಧ ಸಂಘ-ಸAಸ್ಥೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು.
ವಲ್ನರೆಬಲ್, ಕ್ರಿಟಿಕಲ್ ಮತಗಟ್ಟೆಗಳಿಗೆ ಸಿಎಪಿಎಫ್ ತಂಡವನ್ನು ನಿಯೋಜಿಸಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ವೀರಾಜಪೇಟೆಯಲ್ಲಿ ತಿತಿಮತಿ ಮತಗಟ್ಟೆಗಳನ್ನು ವಿಶೇಷವಾಗಿ ಕಾಫಿ, ಅರಣ್ಯ ಮತ್ತು ವನ್ಯಜೀವಿ ಹಾಗೂ ಟ್ರೆöÊಬಲ್ ಥೀಮ್‌ನಲ್ಲಿ ವಿನ್ಯಾಸಗೊಳಿಸಲಾಗಿತ್ತು. ೫ ಸಖಿ ಮತಗಟ್ಟೆ , ೧ ವಿಶೇಷಚೇತನರ ಮತಗಟ್ಟೆ, ೧ ಯುವ ಮತಗಟ್ಟೆ, ೧ ಥೀಮ್ ಬೇಸ್ಡ್ ಮತಗಟ್ಟೆ, ೨ ಎಥಿನಿಕ್ ಮತಗಟ್ಟೆ ಸ್ಥಾಪಿಸಲಾಗಿತ್ತು.
ಮತಗಟ್ಟೆಯ ಸಿಬ್ಬಂದಿಗಳಿಗೆ ೩೮ ಸಾರಿಗೆ ಬಸ್, ೨೬ ಮಿನಿ ಬಸ್, ೩೪ ಜೀಪುಗಳನ್ನು ೨೦ ಮೀಸಲು ವಾಹನ ನಿಯೋಜಿಸಲಾಗಿತ್ತು.
ಯುವ ಜನತೆಯಾದಿಯಾಗಿ ವಯೋವೃದ್ಧರವರೆಗೂ ಎಲ್ಲರೂ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡ ದೃಶ್ಯ ಕಂಡುಬAತು.
ವಯಸ್ಕರಿಗೆ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದರು.