ನಾಪೋಕ್ಲು, ಮೇ ೧೦: ಹೋಬಳಿ ವ್ಯಾಪ್ತಿಯ ೩೧ ವಿವಿಧ ಮತಗಟ್ಟೆಗಳಲ್ಲಿ ಮತದಾನ ಇಂದು ಶಾಂತಿಯುತವಾಗಿ ನಡೆಯಿತು. ನಕ್ಸಲ್ ಪೀಡಿತ ಅತಿ ಸೂಕ್ಷö್ಮ ಪ್ರದೇಶವಾದ ಚೈಯ್ಯಂಡಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನೋಳ ಸರ್ಕಾರಿ ಪ್ರಾಥಮಿಕ ಶಾಲಾ ಮತದಾನ ಕೇಂದ್ರ ಹಾಗೂ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಸರ್ಕಾರಿ ಶಾಲಾ ಮತದಾನ ಕೇಂದ್ರದ ಎರಡರಲ್ಲಿ ವಿಶೇಷ ಭದ್ರತೆಯನ್ನು ಒದಗಿಸಲಾಗಿತ್ತು.

ನಾಪೋಕ್ಲುವಿನ ಹಿರಿಯರಾದ ಬೊಪ್ಪೆರ ಕಾವೇರಪ್ಪ (೯೬), ಬಿದ್ದಾಟಂಡ ಪಾಪ ಮುದ್ದಯ್ಯ (೮೪), ಕಲ್ಲೇಂಗಡ ಪೂವಯ್ಯ (೮೨), ಮಣವಟ್ಟೀರ ಕೆ. ತಿಮ್ಮಯ್ಯ (೭೩) ಅಮೀನಾ (೯೦) ಸೇರಿದಂತೆ ಹಲವರು ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬೊಪ್ಪೆರ ಕಾವೇರಪ್ಪ (೯೬) ಮಾತನಾಡಿ, ಮತ ನೀಡುವ ಹಕ್ಕು ಚಲಾಯಿಸಿದ್ದೇನೆ.ಗೆದ್ದ ಅಭ್ಯರ್ಥಿಗಳು ತಾವು ನೀಡಿದ ಆಶ್ವಾಸನೆಯನ್ನು ಈಡೇರಿಸಿ ಉತ್ತಮ ಆಡಳಿತ ನೀಡುವಂತಾಗಬೇಕು ಎಂದರು.

ಮತದಾನ ಕೇಂದ್ರಗಳಿಗೆ ಪೊಲೀಸ್ ಉಪ ಅಧೀಕ್ಷಕ ಸುಂದರ್ ರಾಜ್, ಡಿವೈಎಸ್‌ಪಿ ಜಗದೀಶ್ ಭೇಟಿ ನೀಡಿ ಪರಿಶೀಲನೆ ಮಾಡಿ ಸಿಬ್ಬಂದಿಗಳಿAದ ಮಾಹಿತಿಗಳನ್ನು ಪಡೆದುಕೊಂಡರು.