ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಶಾಲೆಗಳನ್ನು ಮತಗಟ್ಟೆಗಳಾಗಿ ಬಳಸಿಕೊಳ್ಳಲಾಗಿತ್ತು. ಆದರೆ, ಪ್ರಸ್ತುತ ಶಾಲೆಗಳಿಗೆ ರಜೆ ಇದ್ದ ಕಾರಣದಿಂದ ಶೌಚಾಲಯಗಳ ಸಮರ್ಪಕ ನಿರ್ವಹಣೆ ಇಲ್ಲದೆ ಹಲವು ಕಡೆಗಳಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ನೌಕರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಹಲವು ಮಂದಿ ‘ಶಕ್ತಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲವೆಡೆ ಶೌಚಾಲಯಗಳಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಇರಲಿಲ್ಲ. ಇನ್ನೂ ಕೆಲವೆಡೆ ಶೌಚಾಲಯಗಳ ಬಾಗಿಲುಗಳಿಗೆ ಚಿಲಕವೇ ಇರಲಿಲ್ಲ. ಮತ್ತೂ ಕೆಲವೆಡೆ ಶೌಚಾಲಯಗಳು ಅಶುಚಿತ್ವದಿಂದ ಕೂಡಿದ್ದವು. ಇದರಿಂದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ನೌಕರರಾದಿಯಾಗಿ ಇತರ ನೌಕರರು, ಮತದಾರರು ತೊಂದರೆ ಅನುಭವಿಸುವಂತಾಗಿತ್ತು.

ಕಾಡಾನೆ ತಡೆ ಕಾರ್ಯಪಡೆ ನಿಯೋಜನೆ

ಚುನಾವಣಾ ಪ್ರಕ್ರಿಯೆ ಯಾವುದೇ ಅಡೆ-ತಡೆಗಳಿಲ್ಲದೆ ಸುಸೂತ್ರವಾಗಿ ನಡೆಯಬೇಕೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಕೂಡ ಕಾರ್ಯಾಚರಣೆಗಿಳಿದಿತ್ತು. ವನ್ಯಜೀವಿ ಉಪಟಳವಿರುವ ಪ್ರದೇಶ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳಲ್ಲಿ ಕಾಡಾನೆ ತಡೆ ಕಾರ್ಯಪಡೆಯನ್ನು ಅರಣ್ಯ ಇಲಾಖೆ ನಿಯೋಜನೆ ಮಾಡಿತ್ತು. ಮಡಿಕೇರಿ ತಾಲೂಕಿನ ಗಾಳಿಬೀಡು ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳ ಹಾವಳಿ ಅಧಿಕವಿರುವ ಗ್ರಾಮಗಳಲ್ಲಿನ ಮತಗಟ್ಟೆಗಳಲ್ಲಿ ಕಾಡಾನೆ ತಡೆ ಕಾರ್ಯಪಡೆ ಕರ್ತವ್ಯ ನಿರ್ವಹಿಸಿತು.

ಬಿರುಸಿನ ಮತದಾನ

ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಾಲ್ಕು ಮತಗಟ್ಟೆಗಳನ್ನು ತೆರೆಯಲಾಗಿತ್ತು. ಈ ಪೈಕಿ ಎರಡು ಸೂಕ್ಷö್ಮ ಮತಗಟ್ಟೆಗಳಾಗಿದ್ದವು. ಇಲ್ಲಿನ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯಿತು. ಪಾರ್ಶ್ವವಾಯು ಪೀಡಿತರಾದ ಎಂ. ಕುಂಜಿರ ಎಂಬವರು ತಮ್ಮ ಪುತ್ರ ವಾಸು ಅವರ ಸಹಾಯದೊಂದಿಗೆ ವೀಲ್‌ಚೇರ್ ಮೂಲಕ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾವಣೆ ಮಾಡಿದರು.