ನಾಪೋಕ್ಲು, ಮೇ ೧೦: ಮಲೇಶ್ಯಾದಲ್ಲಿ ತಾ. ೧೨ ರಿಂದ ೧೪ ರ ತನಕ ನಡೆಯಲಿರುವ ೧೯ನೇ ಅಂರ‍್ರಾಷ್ಟಿçÃಯ ಓಕಿನಾವ ಗೊಜು-ರಿಯು ಇಪೋಹ್ ಸಿಟಿ ಕರಾಟೆ ಚಾಂಪಿಯನ್ ಶಿಪ್ - ೨೦೨೩ಗೆ ಬಾಲಕರ (೭-೧೦ ವರ್ಷದೊಳಗಿನ ವಿಭಾಗದಲ್ಲಿ) ಕೊಡಗಿನ ನಂಜರಾಯಪಟ್ಟಣದ ಕೊಳ್ಳೀರ ಯೋಗೇಶ್-ರಮ್ಯಾ ದಂಪತಿ ಪುತ್ರ ಭವಿನ್ ಆಯ್ಕೆಯಾಗಿದ್ದಾನೆ. ಈತ ಡಾ. ಎಸ್. ಷಣ್ಮುಗಮ್ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು ಪ್ರಸ್ತುತ ಬೆಂಗಳೂರಿನ ಇಂಡಿಯನ್ ಏರ್ಫೋರ್ಸ್ (ವಾಯು ಸೇನಾ) ಶಾಲೆಯಲ್ಲಿ ೩ನೇ ತರಗತಿಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದು ಈ ಪುಟ್ಟ ಬಾಲಕನ ಸಾಧನೆ ಕೊಡಗಿಗೆ ಮತ್ತು ರಾಜ್ಯ, ರಾಷ್ಟçಕ್ಕೆ ಹೆಮ್ಮೆ ತರುವಂತಹ ವಿಚಾರವಾಗಿದೆ.