ಮಡಿಕೇರಿ, ಮೇ ೧೦: ಶ್ರೀ ಶಕ್ತಿ ಗಣಪತಿ ಪ್ರತಿಷ್ಠಾ ಉತ್ಸವ ತಾ. ೧೩ ರಂದು ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ. ಪ್ರತಿಷ್ಠಾ ವಾರ್ಷಿಕೋತ್ಸವ ಕಾಸರಗೋಡು ಜಿಲ್ಲೆಯ ಗೋಪಾಲಕೃಷ್ಣ ಕೆದಿಲಾಯ ತಂತ್ರಿಗಳ ನೇತೃತ್ವದಲ್ಲಿ ಜರುಗಲಿದೆ. ಅಂದು ಬೆಳಿಗ್ಗೆ ೭ ಗಂಟೆಗೆ ೨೧ ತೆಂಗಿನಕಾಯಿಯ ಗಣಹೋಮ, ಕಲಶಾಭಿಷೇಕ, ೧೨ ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ಕಾರ್ಯಕ್ರಮ ನಡೆಯಲಿದೆ.