ಗೋಣಿಕೊಪ್ಪ ವರದಿ, ಮೇ ೧೦: ಅಮ್ಮಕೊಡವ ಜನಾಂಗದ ಅಮ್ಮತ್ತೀರ ಕ್ರಿಕೆಟ್ ಕಪ್ ಚಾಂಪಿಯನ್ ತಂಡದ ಆಟಗಾರರನ್ನು ಮಾಯಮುಡಿ ಗ್ರಾಮದ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಮತ್ತು ಮಾನಿಲ್ ಅಯ್ಯಪ್ಪ ಯುವಕ ಸಂಘದ ವತಿಯಿಂದ ಸನ್ಮಾನಿಸ ಲಾಯಿತು. ಸಮಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಟಗಾರರಾದ ಬಲ್ಯಂಡ ಎಸ್. ಪ್ರಜ್ವಲ್, ಬಿ.ಡಿ. ಶರತ್, ಬಿ.ಎಸ್. ಸುಧೀರ್, ಬಿ.ಎಸ್. ಶೇಷಸೈನ, ಬಿ.ಎಂ. ಯೋಗೇಶ್, ಬಿ.ಎಸ್. ಸೂರಜ್, ಬಿ.ಪಿ. ಕಾಮಿತ್, ಬಿ.ಎನ್. ದಿನು, ಬಿ.ಪಿ. ಸುಧನ್, ಬಿ.ಜೆ. ಅಭಿಷೇಕ್, ಬಿ.ಆರ್. ಅಜಿತ್, ವ್ಯವಸ್ಥಾಪಕರಾದ ಬಿ.ಡಿ. ಅರುಣ, ಬಿ.ಜಿ. ರವಿ ಸನ್ಮಾನ ಸ್ವೀಕರಿಸಿದರು. ಮಾಯಮುಡಿ ಗ್ರಾಮದ ಬಲ್ಯಂಡ ಕುಟುಂಬ ಅಮ್ಮಕೊಡವ ಜನಾಂಗದ ಕ್ರಿಕೆಟ್ ಕಪ್ ಗೆದ್ದಿರುವುದು ಮಾಯಮುಡಿ ಗ್ರಾಮಕ್ಕೆ ಮತ್ತಷ್ಟು ಗೌರವ ತಂದAತಾಗಿದೆ. ಆಟಗಾರರ ಕೊರತೆ ನಡುವೆಯೂ ಕೇವಲ ಹನ್ನೊಂದು ಆಟ ಗಾರರನ್ನು ಸೇರಿಸಿಕೊಂಡು ತಂಡವಾಗಿ ಕಪ್ ಗೆದ್ದಿರುವ ಬಗ್ಗೆ ಪ್ರಶಂಸೆ ವ್ಯಕ್ತ ವಾಯಿತು. ಅತಿಥಿಯಾಗಿ ಕಾಫಿ ಬೆಳೆಗಾರರಾದ ಕೊಡಂದೇರ ತಿಮ್ಮಯ್ಯ, ಉತ್ತರೆ ತಿಮ್ಮಯ್ಯ, ಮದ್ರೀರ ಕರುಂಬಯ್ಯ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಬಲ್ಯಂಡ ಕುಟುಂಬಸ್ಥರು ಪಾಲ್ಗೊಂಡಿ ದ್ದರು. ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಗೌರವ ಅಧ್ಯಕ್ಷ ಸಣ್ಣುವಂಡ ಬಿ. ರಮೇಶ್, ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್, ಮಾನಿಲ್ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಚೆಪ್ಪುಡೀರ ಪ್ರದೀಪ್ ಪೂವಯ್ಯ, ಸದಸ್ಯರಾದ ಪುಚ್ಚಿಮಾಡ ಕಿಶೋರ್, ಆಪಟ್ಟೀರ ಸಿ. ಪ್ರದೀಪ್, ಸಣ್ಣುವಂಡ ಆಶಿಕ್ ಕಾರ್ಯಪ್ಪ, ಆಪಟ್ಟೀರ ಸುಬ್ಬಯ್ಯ, ಆಪಟ್ಟೀರ ಬೋಪಣ್ಣ, ಚೆಪ್ಪುಡೀರ ಮಧು ಅಪ್ಪಣ್ಣ ಇದ್ದರು.