ನಾಪೋಕ್ಲು, ಮೇ ೯: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಮಂಗಳವಾರದ ಪಂದ್ಯಗಳಲ್ಲಿ ಆರು ತಂಡಗಳು ಮುನ್ನಡೆ ಸಾಧಿಸಿದವು.
ದಿನದ ಮೊದಲ ಪಂದ್ಯದಲ್ಲಿ ಕಾಂಡೇರ ತಂಡವು ಎರಡು ವಿಕೆಟ್ ನಷ್ಟಕ್ಕೆ ೫೭ ರನ್ ಗಳಿಸಿತು. ಉತ್ತರವಾಗಿ ಆಡಿದ ಕರಿನೆರವಂಡ ತಂಡ ಮೂರು ವಿಕೆಟ್ ನಷ್ಟಕ್ಕೆ ೬೧ ರನ್ ಗಳಿಸಿ ಗೆಲುವು ಸಾಧಿಸಿತು. ಪಟ್ರಪಂಡ ಒಂದು ವಿಕೆಟ್ ನಷ್ಟಕ್ಕೆ ೧೦೫ ರನ್ ಗಳಿಸಿದರೆ ಆಲೆಮಾಡ ಏಳು ವಿಕೆಟ್ ನಷ್ಟಕ್ಕೆ ೩೮ ರನ್ ಮಾಡಿ ಸೋಲು ಅನುಭವಿಸಿತು. ಮಂಡುವAಡ ತಂಡ ಒಂದು ವಿಕೆಟ್ ನಷ್ಟಕ್ಕೆ ೬೬ ರನ್ ಗಳಿಸಿದರೆ ಚನ್ನಪಂಡ ನಾಲ್ಕು ವಿಕೆಟ್ ನಷ್ಟಕ್ಕೆ ೪೨ ಗಳಿಸಿ ಸೋಲು ಅನುಭವಿಸಿತು. ಪಾರುವಂಗಡ ಆರು ವಿಕೆಟ್ ನಷ್ಟಕ್ಕೆ ೨೮ ರನ್ ಮಾಡಿತು. ಉತ್ತರವಾಗಿ ಆಡಿದ ಮುಕ್ಕಾಟಿರ (ಪುಲಿಕೋಟು) ತಂಡ ಆರು ವಿಕೆಟ್ ನಷ್ಟಕ್ಕೆ ೩೦ ರನ್ ಗಳಿಸಿ ಗೆಲುವು ಸಾಧಿಸಿತು. ಮುಂದಿನ ಪಂದ್ಯದಲ್ಲಿ ಮುಂಡಚಾಡಿರ ಒಂದು ವಿಕೆಟ್ ನಷ್ಟಕ್ಕೆ ೭೮ ರನ್ ಗಳಿಸಿತು. ಉತ್ತರವಾಗಿ ಆಡಿದ ತಂಡ ಎಂಟು ವಿಕೆಟ್ ನಷ್ಟಕ್ಕೆ ೪೧ ರನ್ ಗಳಿಸಿ ಸೋಲು ಅನುಭವಿಸಿತು. ಓಡಿಯಂಡ ತಂಡ ಐದು ವಿಕೆಟ್ ನಷ್ಟಕ್ಕೆ ೩೩ ರನ್ ಗಳಿಸಿತು. ತೀತಿರ ಐದು ವಿಕೆಟ್ ನಷ್ಟಕ್ಕೆ ೨೮ ರನ್ ಗಳಿಸಿ ಸೋಲನುಭವಿಸಿತು.
ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಪಂದ್ಯಗಳು ನಡೆಯುವುದಿಲ್ಲ.