ಕೂಡಿಗೆ, ಮೇ ೯: ಕೂಡಿಗೆ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆ ಮತ್ತು ಗುಡುಗು ಸಿಡಿಲಿನಿಂದಾಗಿ ಅನೇಕ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ ಉಂಟಾಗಿದೆ.

ಸಿಡಿಲಿನಿAದಾಗಿ ಹುದುಗೂರು ಗ್ರಾಮದ ಚೇತನ್ ಎಂಬವರ ಮನೆಯ ಕಿಟಕಿ ಬಾಗಿಲು ಮೂಲಕ ಸಣ್ಣ ಪ್ರಮಾಣದಲ್ಲಿ ಸಿಡಿಲು ಬಡಿದ ಪರಿಣಾಮ ಚೇತನ್ ಅವರ ಲ್ಯಾಪ್‌ಟಾಪ್ ಹಾಳಾಗಿದೆ. ಶಬ್ಧದಿಂದಾಗಿ ಚೇತನ್ ಅವರ ಕಿವಿಯ ಭಾಗಕ್ಕೆ ಸಣ್ಣ ಪ್ರಮಾಣದಲ್ಲಿ ಪೆಟ್ಟಾಗಿ ಅಪಾಯದಿಂದ ಪಾರಾಗಿದ್ದಾರೆ.