ಸಿದ್ದಾಪುರ, ಮೇ ೯: ಸಿದ್ದಾಪುರ ಸಂತ ಜೋಸೆಫರ ಚರ್ಚ್ನ ವಾರ್ಷಿಕೋತ್ಸವ ವಿಜೃಂಭಣೆಯಿAದ ನಡೆಯಿತು. ವಾರ್ಷಿಕೋತ್ಸವದ ಪ್ರಯುಕ್ತ ದಿವ್ಯ ಅಡಂಬರ ಬಲಿ ಪೂಜೆಯನ್ನು ಬೆಂಗಳೂರಿನ ಇಂದಿರಾ ನಗರದ ಫಾದರ್ ಬಾಲರಾಜ್ ನೆರವೇರಿಸಿದರು. ಕ್ರೆöÊಸ್ತ ಬಾಂಧವರು ನೂರಾರು ಸಂಖ್ಯೆಯಲ್ಲಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಹಾಗೂ ದಿವ್ಯ ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಂತ ಜೋಸೆಫರ ವಿಗ್ರಹವನ್ನು ವಿದ್ಯುತ್ ಅಲಂಕೃತ ಮಂಟಪ ವಾದ್ಯಗೋಷ್ಠಿಗಳ ಮೂಲಕ ಹಳೇ ಸಿದ್ದಾಪುರದ ರಸ್ತೆಯ ಸಂತ ಮೇರಿ ಗವಿಯವರೆಗೆ ಭಕ್ತಾದಿಗಳು ಮೇಣದ ಬತ್ತಿ ಹಿಡಿದು ಮೆರವಣಿಗೆ ಮೂಲಕ ತೆರಳಿ ಅಲ್ಲಿ ಪ್ರಾರ್ಥನೆ ಸಲ್ಲಿಸಿ ಚರ್ಚ್ಗೆ ಹಿಂತಿರುಗಿದರು. ಸಿದ್ದಾಪುರ ಧರ್ಮ ಕೇಂದ್ರದ ಫಾದರ್ ಮೈಕಲ್ ಮೇರಿ, ಫಾದರ್ ದಯಾನಂದ ಪ್ರಭು ವೀರಾಜಪೇಟೆ, ಫಾದರ್ ಜ್ಞಾನಪ್ರಕಾಶ್ ನಾಪೋಕ್ಲು, ಮತ್ತು ವಿವಿಧ ಧರ್ಮ ಕೇಂದ್ರದ ಗುರುಗಳು ವಾರ್ಷಿಕೋತ್ಸವ ಹಬ್ಬದಲ್ಲಿ ಪಾಲ್ಗೊಂಡಿದ್ದು ನೆರೆದಿದ್ದ ಭಕ್ತರಿಗೆ ಆಶೀರ್ವದಿಸಿದರು.