ನಾಪೋಕ್ಲು, ಮೇ ೪: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ ‘ನಮ್ಮ ನಡೆ ಮತಗಟ್ಟೆಯ ಕಡೆಗೆ’ ಕಾರ್ಯಕ್ರಮವನ್ನು ಚುನಾವಣಾ ಆಯೋಗದ ಆದೇಶದಂತೆ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಮತಗಟ್ಟೆಯಲ್ಲಿ ನಡೆಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಡಾ. ಅವನಿಜ ಸೋಮಯ್ಯ ಮತದಾನದ ಅರಿವು ಬಗ್ಗೆ ಮಾಹಿತಿ ನೀಡಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹ್ಯಾರಿಸ್ ಭಾಗವಹಿಸಿದ್ದರು. ಅಂಬಿಕಾ ಪ್ರಸಾದ್, ರೋನಿಕ ರಾಧಾಕೃಷ್ಣ, ಅಕ್ಷತಾ ಇವರು ಚುನಾವಣಾ ಗೀತೆ ಹಾಡುವ ಮೂಲP ಅರಿವು ಮೂಡಿಸಿದರು. ಮತಗಟ್ಟೆ ಅಧಿಕಾರಿ ಓಂಪ್ರಕಾಶ್, ಯುವ ಮತದಾರರು, ವಿಶೇಷಚೇತನ ಮತದಾರರು ಇದ್ದರು.