ಮುಳ್ಳೂರು, ಮೇ ೪: ಚುನಾವಣಾ ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ಸಂಬAಧಪಟ್ಟ ಗ್ರಾ.ಪಂ.ಗಳ ಬೂತ್ ಮತಗಟ್ಟೆ ವ್ಯಾಪ್ತಿಯಲ್ಲಿ ಬಿರುಸಿನ ಅಂಚೆ ಮತದಾನ ಕಾರ್ಯ ನಡೆಯುತ್ತಿದೆ. ಶನಿವಾರಸಂತೆ, ಆಲೂರು-ಸಿದ್ದಾಪುರ, ನಿಡ್ತ, ಗೌಡಳ್ಳಿ, ಮಳ್ತೆ ಗ್ರಾ.ಪಂ. ವ್ಯಾಪ್ತಿಯ ವಿವಿಧ ಬೂತ್ ಮತಗಟ್ಟೆ ವ್ಯಾಪ್ತಿಯಲ್ಲಿ ಬಿರುಸಿನ ಅಂಚೆ ಮತದಾನ ಕಾರ್ಯ ನಡೆಯಿತು.
ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆ ಮನೆಗಳಿಗೆ ಹೋಗಿ ವಿಶೇಷಚೇತನರು ಸೇರಿದಂತೆ ೮೦ ವರ್ಷ ಮೇಲ್ಪಟ್ಟವರಿಂದ ಅಂಚೆ ಮತದಾನ ಮಾಡಿಸಿದರು. ಶನಿವಾರಸಂತೆ, ಆಲೂರು-ಸಿದ್ದಾಪುರ, ನಿಡ್ತ ಗ್ರಾ.ಪಂ.ಗಳ ವಿವಿಧ ೭೫ ಬೂತ್ ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು ೧೨೬ ಅಂಚೆ ಮತದಾರರಿದ್ದು ಈ ಪೈಕಿ ಮಂಗಳವಾರ ೭೬ ಮಂದಿ ಅಂಚೆ ಮೂಲಕ ಮತದಾನ ಮಾಡಿದ್ದಾರೆ. ಗೌಡಳ್ಳಿ, ಮಳ್ತೆ ಗ್ರಾ.ಪಂ. ವ್ಯಾಪ್ತಿಯ ವಿವಿಧ ಬೂತ್ ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು ೮೭ ಮಂದಿ ಅಂಚೆ ಮತದಾರರಿದ್ದು ಮಂಗಳವಾರ ೩೦ ಮಂದಿ ಅಂಚೆ ಮೂಲಕ ಮತದಾನದ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಕಡಿಮೆ ಮಂದಿ ಅಂಚೆ ಮತದಾರರು ಇರುವ ಬೂತ್ ಮತಗಟ್ಟೆ ವ್ಯಾಪ್ತಿಯಲ್ಲಿ ಈಗಾಗಲೇ ಅಂಚೆ ಮತದಾನ ಕಾರ್ಯವನ್ನು ಮುಗಿಸಿದ್ದಾರೆ.