ಮಡಿಕೇರಿ ಮೇ ೨: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾಸಿರ್ ಮಕ್ಕಿ ನಾಪೋಕ್ಲುವಿನಲ್ಲಿ ಪ್ರಚಾರ ನಡೆಸಿ ಮತಯಾಚಿಸಿದರು. ನಾಪೋಕ್ಲು ಪಟ್ಟಣದ ಮನೆ, ಅಂಗಡಿ ಮುಂಗಟ್ಟುಗಳಿಗೆ ತೆರಳಿ ತಮಗೆ ಮತ ನೀಡುವಂತೆ ಮನವಿ ಮಾಡಿದರು. ಬಳಿಕ ವಿವಿಧ ಗ್ರಾಮಗಳಿಗೆ ತೆರಳಿ ಮನೆಮನೆಗಳಲ್ಲಿ ಮತಯಾಚನೆ ಮಾಡಿದರು. ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಎ. ಹ್ಯಾರಿಸ್, ಬಶೀರ್, ರಾಶಿದ್, ಸುಲೈಮಾನ್, ಹನೀಫ, ಅಶ್ರಫ್, ಆಶಿಕ್, ಶೌಕತ್, ಶಮೀರ್, ಮುರಾದ್, ಮಹಮ್ಮದ್, ರಶೀದ್ ಸೇರಿದಂತೆ ಅಧಿಕ ಸಂಖ್ಯೆಯ ಬೆಂಬಲಿಗರು ನಾಸಿರ್ ಮಕ್ಕಿ ಪರ ಮತಯಾಚಿಸಿದರು.