ಮಡಿಕೇರಿ, ಮೇ ೨ : ವಿಧಾನಸಭಾ ಚುನಾವಣೆ ಸಂಬAಧ ಚುನಾವಣೆಗೆ ನಿಯೋಜಿಸಿರುವ ಎಲ್ಲಾ ಹಂತದ ಮತಗಟ್ಟೆ ಅಧಿಕಾರಿಗಳು ನಮೂನೆ ೧೨ ಅನ್ನು ಭರ್ತಿ ಮಾಡಿ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್ ತಿಳಿಸಿದ್ದಾರೆ.
ತಾ. ೪ ರವರೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಅವರ ಕಚೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅವರ ಕಚೇರಿಯಲ್ಲಿ (ವೀರಾಜಪೇಟೆ ತಹಶಿಲ್ದಾರರ ಕಚೇರಿ) ಅಂಚೆ ಮತಪತ್ರ ಪಡೆದು ಆಯಾಯ ದಿನಗಳಂದು ಬೆಳಗ್ಗೆ ೯ ರಿಂದ ಸಂಜೆ ೫ ಗಂಟೆವರೆಗೆ ಮತದಾನ ಮಾಡಬಹುದಾಗಿದೆ. ಗೆಜೆಟೆಡ್ ಅಧಿಕಾರಿ ಅವರು ಇರಲಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಹೇಳಿದ್ದಾರೆ.