ಮಡಿಕೇರಿ ಮೇ ೨: ಮಡಿಕೇರಿ ವಿಧಾನಸಭಾ ಕ್ಷೇತ್ರದ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಹೆಚ್.ಎಂ. ಸೋಮಪ್ಪ ಅವರು ಸೋಮವಾರಪೇಟೆಯ ವಿವಿಧೆಡೆ ಪ್ರಚಾರ ನಡೆಸಿದರು.
ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಪಕ್ಷದ ಯೋಜನೆಗಳ ಕುರಿತು ಜನರಿಗೆ ಅರಿವು ಮೂಡಿಸಿ ಮತಯಾಚಿಸಿದರು.
ಸಮುದಾಯದ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಕ್ಷೇತ್ರದ ಜನತೆಯ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲು ಚುನಾವಣಾ ಸ್ಪರ್ಧೆಗೆ ಇಳಿದಿದ್ದು, ಜನತೆ ಈ ಬಾರಿ ಮತ ನೀಡುವ ಮೂಲಕ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಪಕ್ಷದ ಕಾರ್ಯದರ್ಶಿ ಸುಂದರ, ಸಹಾ ಕಾರ್ಯದರ್ಶಿ ಸಭಾನ, ಸದಸ್ಯರಾದ ಪಾರ್ವತಿ, ಲಕ್ಷಿö್ಮÃ, ಆದಿ ದ್ರಾವಿಡ ಕಾರ್ಯದರ್ಶಿ ಮಧು, ಸಿಪಿಐ ಸಂಚಾಲಕ ರಂಜನ್ ಹಾಜರಿದ್ದರು.