ಮಡಿಕೇರಿ, ಮೇ. ೨: ಹೊರ ಜಿಲ್ಲೆಯ ಆಕಾಂಕ್ಷಿಯನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದ ಹಿನ್ನೆಲೆ, ಮಾಜಿ ಸಚಿವ ಬಿ.ಎ. ಜೀವಿಜಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಥಳೀಯ ಅಭ್ಯರ್ಥಿ ಯೊಬ್ಬರಿಗೆ ಬೆಂಬಲಿಸಲು ನಿರ್ಧಾರ ಕೈಗೊಂಡಿ ದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಎ. ಜೀವಿಜಯ, ಬಹಳ ವರ್ಷ ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೇನೆ. ಸೋಲು-ಗೆಲುವನ್ನು ಕಂಡಿದ್ದೇನೆ. ಕೆಲವೊಂದು ತಪ್ಪು ಹೆಜ್ಜೆಯನ್ನು ಇಟ್ಟಿದ್ದೇನೆ. ಆದರೆ, ಜನತೆ ಕೊಟ್ಟ ಅಧಿಕಾರವನ್ನು ಎಂದೂ ದುರುಪಯೋಗಪಡಿಸಿಕೊಂಡಿಲ್ಲ. ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಿದ ಆತ್ಮತೃಪ್ತಿ ಇದೆ. ಜಾತ್ಯತೀತ ಶಕ್ತಿ ಒಂದಾಗಬೇಕೆAಬ ನಿಟ್ಟಿನಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡೆ. ತಾನು ಇದೀಗ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರಿಂದ ಯಾರದೇ ಹಂಗು ತನಗಿಲ್ಲ, ಸರ್ವ ಸ್ವತಂತ್ರö್ಯನಾಗಿದ್ದೇನೆ ಎಂದರು.

ಪತ್ರಕ್ಕೆ ಬೆಲೆ ಇಲ್ಲ

ಹೊರ ಜಿಲ್ಲೆಯ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಆಕಾಂಕ್ಷಿಗಳ ಸಂದರ್ಶನ, ಆಯ್ಕೆ ಪ್ರಕ್ರಿಯೆ ಸಂದರ್ಭ ಹಾಗೂ ಪತ್ರದ ಮೂಲಕವೂ ತಿಳಿಸಿದ್ದೆ. ಆದರೆ, ತನ್ನ ಪತ್ರಕ್ಕೆ ಕವಡೆ ಕಾಸಿನ ಬೆಲೆ ನೀಡಿಲ್ಲ ಎಂದು ಜೀವಿಜಯ ಪಕ್ಷದ ಪ್ರಮುಖರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.