ಸೋಮವಾರಪೇಟೆ, ಮೇ ೨: ಭಾರತೀಯ ಜನತಾ ಪಾರ್ಟಿಯ ಭದ್ರಕೋಟೆಯಾಗಿರುವ ಕೊಡಗು ಶಾಂತಿಯ ನಾಡಾಗಿ ಉಳಿಯ ಬೇಕಾದರೆ ಈ ಭದ್ರಕೋಟೆ ಇನ್ನಷ್ಟು ಭದ್ರವಾಗಬೇಕು. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ರಾಜ್ಯದಲ್ಲಿ ಬಿಜೆಪಿಗೆ ೧೩೦ ಸ್ಥಾನ ಖಚಿತವಾಗಿದ್ದು, ಕೊಡಗಿನ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳು ಮಂತ್ರಿ ಯಾಗಿ ಜನ ಸೇವೆ ಮುಂದುವರೆ ಸಲಿದ್ದಾರೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು.
ಮಂಡಲ ಬಿಜೆಪಿ ವತಿಯಿಂದ ಪಟ್ಟಣದ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ೨೦೧೩ ರಿಂದ ೨೦೧೮ರವರೆಗಿನ ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗಳಾಗಿವೆ. ಕೊಡಗಿನಲ್ಲೂ ಸಾವುಗಳಾಗಿವೆ. ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಿಎಫ್ಐ, ಕೆಎಫ್ಡಿ ಸಂಘಟನೆಯ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂಪಡೆದಿದ್ದರಿAದ ಸಮಾಜಘಾತುಕ ಕೃತ್ಯಗಳು ಹೆಚ್ಚು ನಡೆದಿವೆ ಎಂದು ಬೊಟ್ಟು ಮಾಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಕೊಡಗಿನಲ್ಲೂ ಅಭಿವೃದ್ಧಿಗಳಾಗಿವೆ. ಬೆಂಗಳೂರು-ಮೈಸೂರು ಹೆದ್ದಾರಿಯನ್ನು ೯,೫೦೦ ಕೋಟಿಯಲ್ಲಿ ಅಭಿವೃದ್ಧಿ ಗೊಳಿಸಲಾಗಿದೆ. ಮೈಸೂರಿನಿಂದ ಕೊಡಗಿನ ಗುಡ್ಡೆಹೊಸೂರುವರೆಗೆ ೪,೧೦೦ ಕೋಟಿ ವೆಚ್ಚದಲ್ಲಿ ಚತುಷ್ಪತ ರಸ್ತೆ ನಿರ್ಮಾಣ ಕಾರ್ಯ ಈ ತಿಂಗಳ ಅಂತ್ಯದೊಳಗೆ ಆರಂಭಗೊಳ್ಳಲಿದೆ. ಇದು ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಪಟ್ಟಿಯಲ್ಲಿದೆ ಎಂದರು.
ಚನ್ನರಾಯಪಟ್ಟಣ, ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ ರಸ್ತೆಯನ್ನು ಭಾರತ್ ಮಾಲಾ-೨
(ಮೊದಲ ಪುಟದಿಂದ) ಯೋಜನೆಯಡಿ ಸೇರ್ಪಡೆ ಗೊಳಿಸಲಾಗಿದೆ. ಇದು ರಾಷ್ಟಿçÃಯ ಹೆದ್ದಾರಿಯಾಗಲಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ ಆದೇಶ ಪಡೆಯಲಾಗಿದೆ. ಈ ಹಿನ್ನೆಲೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರೇ ಇದ್ದರೆ ಯೋಜನೆಯ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ. ತಪ್ಪಿದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಎದುರಾದ ಅಡೆತಡೆಗಳು ಎದುರಾಗಲಿವೆ ಎಂದು ಪ್ರತಾಪ್ ಸಿಂಹ ಹೇಳಿದರು.
ಜಾತಿಯ ಗೋಡೆಗಳನ್ನು ಸಡಿಲಿಸಿ ಹೊರ ಬಂದು ಎಲ್ಲರ ವಿಕಾಸ ಬಯಸುವ ಬಿಜೆಪಿ ಬೆಂಬಲಿಸಬೇಕು. ಆಗ ಮಾತ್ರ ಹಿಂದೂ ಸಮಾಜ ಉಳಿಯಲಿದೆ ಎಂದ ಅವರು, ಬಿಜೆಪಿ ಸರ್ಕಾರ ಒಕ್ಕಲಿಗರು, ಲಿಂಗಾಯತರು, ದಲಿತರು ಸೇರಿದಂತೆ ಇತರ ಹಿಂದುಳಿದ ವರ್ಗಕ್ಕೆ ನೀಡಿರುವ ಮೀಸಲಾತಿಯನ್ನು ವಾಪಸ್ ಪಡೆಯುವ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಗೆದ್ದರೆ ಮೀಸಲಾತಿ ಕಿತ್ತುಕೊಳ್ಳುತ್ತಾರೆ. ಪ್ರಜ್ಞಾವಂತ ಮತದಾರರು ಯೋಚಿಸಿ ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಕೊಡಗಿನಲ್ಲಿ ೪೫೦ ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ. ಸೈನಿಕ ಶಾಲೆ, ಇಂಜಿನಿಯರಿAಗ್, ಮೆಡಿಕಲ್ ಕಾಲೇಜು, ಪ್ರತ್ಯೇಕ ವಿಶ್ವವಿದ್ಯಾನಿಲಯ, ರಸ್ತೆಗಳು ನಿರ್ಮಾಣವಾಗಿವೆ. ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರಿಗೆ ಮಡಿಕೇರಿ ಕ್ಷೇತ್ರದಲ್ಲಿ ೩೦೦ ಕೋಟಿ ಅನುದಾನ ನೀಡಲಾಗಿದೆ. ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಘೋಷಣೆಯಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ.
ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಅಪ್ಪಚ್ಚು ರಂಜನ್ ಮಾತನಾಡಿ, ಮಡಿಕೇರಿ ಕ್ಷೇತ್ರದಲ್ಲಿ ೧೮೦೦ ಕೋಟಿಗೂ ಅಧಿಕ ಅನುದಾನದಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕೊಡ್ಲಿಪೇಟೆ-ಮಡಿಕೇರಿ ರಸ್ತೆಯನ್ನು ೩೭ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕಾವೇರಿ ನೀರಾವರಿ ನಿಗಮದಿಂದ ದಲಿತ ಕಾಲೋನಿಗಳಿಗೆ ೪೦೦ ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಮೀಸಲಾತಿ ಹೆಚ್ಚಿಸಲಾಗಿದೆ. ದಲಿತ ಸಮುದಾಯ ಕಾಂಗ್ರೆಸ್ನ ನಾಟಕಗಳನ್ನು ನೋಡಿದ್ದು, ಇದೀಗ ಬದಲಾಗಿದ್ದಾರೆ ಎಂದು ಅಭಿಪ್ರಾಯಿಸಿದರು.
ಎಲ್ಲಾ ಜಾತಿ-ಸಮುದಾಯಗಳ ಅಭ್ಯುದಯದೊಂದಿಗೆ ಬಿಜೆಪಿ ಕೆಲಸ ಮಾಡುತ್ತಿದೆ. ನಿಗಮಗಳಿಗೆ ೧೫೦೦ ಕೋಟಿ ನೀಡಲಾಗಿದೆ. ಇದನ್ನು ಕಾಂಗ್ರೆಸ್ ಮಾಡಿತ್ತಾ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಭಾಗ್ಯಲಕ್ಷಿö್ಮÃ ಹಾಗೂ ಯಶಸ್ವಿನಿ ಯೋಜನೆಯನ್ನು ಕಿತ್ತುಕೊಂಡಿತು ಎಂದು ಲೇವಡಿ ಮಾಡಿದರು.
ಮಡಿಕೇರಿ ಕ್ಷೇತ್ರದಲ್ಲಿ ಪಿಕ್ನಿಕ್ ಕ್ಯಾಂಡಿಡೇಟ್ ಬಂದಿದ್ದಾರೆ. ಹಣದ ಹೊಳೆ ಹರಿಯುತ್ತಿದೆ ಎಂದ ರಂಜನ್, ಕಾಂಗ್ರೆಸ್ನವರಿಗೆ ಸ್ಥಳೀಯ ಅಭ್ಯರ್ಥಿಯೇ ಸಿಗಲಿಲ್ಲ. ಕಾಂಗ್ರೆಸ್ನ ಹಿರಿಯ ನಾಯಕ ಬಿ.ಎ. ಜೀವಿಜಯ, ಹೆಚ್.ಎಸ್. ಚಂದ್ರಮೌಳಿ, ಹರಪಳ್ಳಿ ರವೀಂದ್ರ, ಲೋಕೇಶ್, ಚಂದ್ರಕಲಾ ಅವರಂತಹ ಮುಖಂಡರಿದ್ದರೂ ಅರಕಲ ಗೂಡಿನವರಿಗೆ ಟಿಕೇಟ್ ನೀಡಿರುವುದು ಕಾಂಗ್ರೆಸ್ನ ದುಸ್ಥಿತಿಗೆ ಸಾಕ್ಷಿಯಾಗಿದೆ ಎಂದರು.
ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆ, ವಿಶ್ವ ವಿದ್ಯಾನಿಲಯಗಳು ನಿರ್ಮಾಣಗೊಂಡಿರುವುದರಿAದ ಅರಕಲಗೂಡಿನ ವಿದ್ಯಾರ್ಥಿಗಳು, ರೋಗಿಗಳು ಮಡಿಕೇರಿಗೆ ಬರುತ್ತಿದ್ದಾರೆ. ಆ ಕ್ಷೇತ್ರವನ್ನು ಪ್ರತಿನಿಧಿಸಿದ ಅಭ್ಯರ್ಥಿಗಳು ಆಸ್ಪತ್ರೆ, ವಿಶ್ವವಿದ್ಯಾನಿಲಯ ಸ್ಥಾಪಿಸಿದ್ದರೆ ಅಲ್ಲಿಯವರು ಕೊಡಗಿಗೆ ಬರುವ ಅವಶ್ಯಕತೆಯಿತ್ತೇ? ಎಂದು ರಂಜನ್ ಪ್ರಶ್ನಿಸಿದರು.
ಕ್ಷೇತ್ರದ ೪೦,೭೫೭ ಮಂದಿ ರೈತರಿಗೆ ೧೫ ಸಾವಿರದಿಂದ ೬೦ ಸಾವಿರದ ವರೆಗೆ ಬೆಳೆಹಾನಿ ಪರಿಹಾರವನ್ನು ಬಿಜೆಪಿ ಸರ್ಕಾರ ನೀಡಿದೆ. ೧೨ಕ್ಕೂ ಅಧಿಕ ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ೯೪ ಸಿ ಮತ್ತು ೯೪ ಸಿಸಿ ಅಡಿಯಲ್ಲಿ ೬ ಸಾವಿರ ಹಕ್ಕುಪತ್ರ, ಅರಣ್ಯ ಹಕ್ಕು ಕಾಯ್ದೆಯಡಿ ೩ ಸಾವಿರ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಲೈನ್ಮನೆಗಳಲ್ಲಿರುವ ಎಲ್ಲರಿಗೂ ನಿವೇಶನ ನೀಡಲು ಬಿಜೆಪಿ ಸರ್ಕಾರ ಕ್ರಮ ವಹಿಸಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ಮನುಕುಮಾರ್ ರೈ ವಹಿಸಿದ್ದರು. ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಪಂಚಾಯತ್ ಮಾಜೀ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜೀ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪಕ್ಷದ ಜಿಲ್ಲಾ ಉಪಾಧ್ಯಕ್ಷ ವಿ.ಕೆ. ಲೋಕೇಶ್, ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ರೂಪಾ ಸತೀಶ್, ಪ್ರಮುಖರಾದ ವಿ.ಎಂ. ವಿಜಯ, ಮಹಿಳಾ ಮೋರ್ಚಾದ ಮಂಜುಳಾ ಸುಬ್ರಮಣಿ, ಯುವ ಮೋರ್ಚಾದ ಚಂದ್ರಶೇಖರ್, ಗೌತಮ್, ಮೋಕ್ಷಿಕ್, ಎಸ್ಸಿ ಮೋರ್ಚಾದ ಎಸ್.ಎ. ಪ್ರತಾಪ್, ರಾಮಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.