ಶನಿವಾರಸಂತೆ, ಮೇ ೩: ಪಟ್ಟಣದ ಕಾರ್ಮಿಕರ ಸಂಘದ ಕಚೇರಿಯಲ್ಲಿ ಅಂರ‍್ರಾಷ್ಟಿçÃಯ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ಹಾಗೂ ಇತರ ಕೂಲಿ ಕಾರ್ಮಿಕರ ಸಂಘದ ಸಹಭಾಗಿತ್ವದಲ್ಲಿ ಕಾರ್ಮಿಕರ ದಿನವನ್ನು ಸರಳವಾಗಿ ಆಚರಿಸಲಾಯಿತು.
ಸಂಘದ ಕಚೇರಿ ಮುಂಭಾಗ ಅಳವಡಿಸಿರುವ ಧ್ವಜಸ್ತಂಭದಲ್ಲಿ ಕಾರ್ಮಿಕರ ಸಂಘಟನೆಯ ಧ್ವಜಾರೋಣವನ್ನು ಸಂಘದ ಅಧ್ಯಕ್ಷ ವಿಠಲ್ ನಾಗರಾಜ್ ನೆರವೇರಿಸಿ ಮಾತನಾಡಿದರು. ಈ ಸಂದರ್ಭ ಸಂಘದ ಸಹ ಕಾರ್ಯದರ್ಶಿ ಲೋಕೇಶ್, ಸದಸ್ಯರಾದ ಬಿಂದಮ್ಮ, ಕೃಷ್ಣ ಇತರರು ಹಾಜರಿದ್ದರು.