ವೀರಾಜಪೇಟೆ, ಏ. ೨೮: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿಯಲ್ಲಿ ಬೂತ್ ವ್ಯಾಪ್ತಿಯ ಮತ ಯಾಚನೆ ಸಂದರ್ಭ ಅಲ್ಲಿನ ಕೊಟ್ಟೋಳಿಯ ನಿವಾಸಿಗಳು ಕಾಂಗ್ರೆಸ್ ಪಕ್ಷ ತೊರೆದು ಸುಮಾರು ೩೦ಕ್ಕೂ ಹೆಚ್ಚು ಮಂದಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇವರನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರು ಶಾಲು ಹೊದಿಸಿ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಶಕ್ತಿ ಕೇಂದ್ರದ ರತ್ನ ಅಯ್ಯಣ್ಣ, ಸ್ಥಳಿಯ ಪಂಚಾಯಿತಿ ಅಧ್ಯಕ್ಷೆ ಶೀಲಾ ಮೇದಪ್ಪ, ಸದಸ್ಯ ಎಂ.ಎA. ಪರಮೇಶ್ವರ, ಪಿ. ರಮೇಶ್ ಕರುಂಬಯ್ಯ, ಸಿ.ರಮೇಶ್ ಪಳಂಗಪ್ಪ, ಹಾಗೂ ಬಿಜೆಪಿ ಪಕ್ಷದ ಪ್ರಮುಖರು ಕಾರ್ಯಕರ್ತರು ಭಾಗವಹಿಸಿದ್ದರು.