ಸೋಮವಾರಪೇಟೆ, ಏ. ೨೮: ಗೋವಾದ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಟಿಎಸ್‌ಎಫ್ ವತಿಯಿಂದ ನಡೆದ ರಾಷ್ಟç ಮಟ್ಟದ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕ್ರೀಡೆಯಲ್ಲಿ ಜಿಲ್ಲೆಯ ಕುಶಾಲನಗರದ ಕಾಂಬ್ಯಾಟ್ ಕ್ಲಬ್‌ನ ಕ್ರೀಡಾಪಟುಗಳು ಚಿನ್ನದ ಪದಕಕ್ಕೆ ಭಾಜನರಾಗಿದಾರೆ.

ಕೆ೧ ಕಿಕ್ ಬಾಕ್ಸಿಂಗ್ ಹಾಗೂ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಕ್ರೀಡಾಕೂಟದಲ್ಲಿ ಡಿ.ವಿ. ವರುಣ್, ಮೊಹಮ್ಮದ್ ಶಾಫಿ ಹಾಗೂ ಎಸ್.ಜಿ. ನವೀನ್ ಜಯ ಸಾಧಿಸುವ ಮೂಲಕ ಉತ್ತಮ ತಂಡ ಎಂದು ಹೆಸರು ಗಳಿಸಿದ್ದಾರೆ.

ಡಿ.ವಿ.ವರುಣ್ ಕೆ೧ ಕಿಕ್ ಬಾಕ್ಸಿಂಗ್‌ನಲ್ಲಿ ಮೂರನೇ ರೌಂಡ್‌ನಲ್ಲಿ ಎದುರಾಳಿಯನ್ನು ಮಣಿಸುವ ಮೂಲಕ ಜಯ ಸಾಧಿಸಿದರು. ರೆಸ್ಲಿಂಗ್‌ನಲ್ಲಿ ಎಸ್.ಜಿ. ನವೀನ್ ಮತ್ತು ಮೊಹಮ್ಮದ್ ಶಾಫಿ ಎದುರಾಳಿಯನ್ನು ಮಣಿಸಿ ಜಯ ಸಾಧಿಸಿದ್ದಾರೆ. ಈ ಕ್ರೀಡಾಪಟುಗಳು ಕುಶಾಲನಗರದ ತರಬೇತುದಾರ ಅಮಿತ್ ವಿಶ್ವನಾಥ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದೆ. ಮುವಾಯ್, ತಾಯ್ ಹಾಗೂ ಜುಜೆನ್ನು ಎಂಬ ಎಲ್ಲಾ ಕ್ರೀಡೆಗಳ ಮಿಶ್ರಣಗೊಂಡ ಕ್ರೀಡಾಪಟುಗಳನ್ನು ಗುರುತಿಸಿ ಸರಿಯಾದ ರೀತಿಯಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಮೂಲಕ ಚಿನ್ನದ ಪದಕ ಗಳಿಸಲು ಸಾಧ್ಯವಾಗಿದೆ. ಈ ಕ್ರೀಡೆಗೆ ಜಿಲ್ಲೆಯಲ್ಲಿ ಹೆಚ್ಚಾಗಿ ಪ್ರೋತ್ಸಾಹ ಸಿಕ್ಕಲ್ಲಿ ಇನ್ನಷ್ಟು ಕ್ರೀಡಾಪಟುಗಳು ಅಂತರ ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ತರಬೇತುದಾರ ಅಮಿತ್ ವಿಶ್ವನಾಥ್ ತಿಳಿಸಿದ್ದಾರೆ.