ಶನಿವಾಸಂತೆ, ಏ. ೨೮: ಸಮೀಪದ ರಾಮನಹಳ್ಳಿ ಗ್ರಾಮಾಧ್ಯಕ್ಷ ರಮೇಶ್ ಹಾಗೂ ಗ್ರಾಮಸ್ಥರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ತೀರ್ಮಾನಿಸಿದ್ದಾರೆ.
ರಾಮನಹಳ್ಳಿ ಗ್ರಾಮದಲ್ಲಿ ೩೦ ಕುಟುಂಬಗಳು ನೆಲೆಸಿದ್ದು ಮತದಾನ ಬಹಿಷ್ಕರಿಸುವ ಒಮ್ಮತದ ತೀರ್ಮಾನ ಮಾಡಿದ್ದು, ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಶನಿವಾಸಂತೆ, ಏ. ೨೮: ಸಮೀಪದ ರಾಮನಹಳ್ಳಿ ಗ್ರಾಮಾಧ್ಯಕ್ಷ ರಮೇಶ್ ಹಾಗೂ ಗ್ರಾಮಸ್ಥರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ತೀರ್ಮಾನಿಸಿದ್ದಾರೆ.
ರಾಮನಹಳ್ಳಿ ಗ್ರಾಮದಲ್ಲಿ ೩೦ ಕುಟುಂಬಗಳು ನೆಲೆಸಿದ್ದು ಮತದಾನ ಬಹಿಷ್ಕರಿಸುವ ಒಮ್ಮತದ ತೀರ್ಮಾನ ಮಾಡಿದ್ದು, ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ನೀಡಿ ಗ್ರಾಮಸ್ಥರ ಮನವೊಲಿಸಿದ್ದರು. ನಂತರ ಪೈಸಾರಿ ಜಾಗದ ಸರ್ವೆ ಕಾರ್ಯ ನಡೆದಿತ್ತು. ಅರಣ್ಯ ಇಲಾಖೆಯಿಂದ ಒಪ್ಪಿಗೆಯೂ ದೊರೆತಿತ್ತು. ಆದರೆ, ಇಲ್ಲಿಯವರೆಗೂ ಆ ಜಾಗಕ್ಕೆ ಪಹಣಿ ಆಗಿರುವುದಿಲ್ಲ. ಸಂಬAಧಿಸಿದ ಕಡತ ತಾಲೂಕು ಕಚೇರಿಯಲ್ಲಿದೆ ಎಂದು ಹೇಳಿದರು.
ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತಾರೆ. ಹಾಗಾಗಿ, ಇದರ ಬಗ್ಗೆ ಸಂಪೂರ್ಣ ದಾಖಲೆಯೊಂದಿಗೆ ಜಿಲ್ಲಾಧಿಕಾರಿ ಯವರಿಗೆ ೨೦೨೧ ರ ಅಕ್ಟೋಬರ್ ೫ ರಂದು ದೂರು ನೀಡಲಾಗಿದೆ. ಜಿಲ್ಲಾಧಿಕಾರಿಯವರು ಉಪವಿಭಾಗಾಧಿಕಾರಿಯವರಿಗೆ ತುರ್ತಾಗಿ ಕ್ರಮಕೈಗೊಂಡು ಇಲಾಖೆಗೆ ವರದಿ ನೀಡುವಂತೆ ತಿಳಿಸಿರುತ್ತಾರೆ. ಆದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ದೂರಿದ್ದಾರೆ.
ಈ ಎರಡು ಬೇಡಿಕೆಗಳನ್ನು ಈಡೇರಿಸುವವರೆಗೂ ಚುನಾವಣೆಯಲ್ಲಿ ಮತದಾನ ಮಾಡದೆ ಬಹಿಷ್ಕರಿಸುತ್ತೇವೆ ಎಂದು ಗ್ರಾಮಾಧ್ಯಕ್ಷ ರಮೇಶ್, ಗ್ರಾಮಸ್ಥರಾದ ಪ್ರವೀಣ್ ಕುಮಾರ್, ಲೋಕೇಶ್, ಅರುಣ್ ಕುಮಾರ್, ಆರ್.ಕೆ. ಹರೀಶ್, ಶರತ್, ಸಂದೀಪ್, ಸುರೇಶ್, ಆರ್.ಎಸ್. ರಕ್ಷಿತ್, ನಾಗಲಕ್ಷ್ಮೀ, ಯಶೋಧಾ, ರಂಜಿತ್, ಮಂಜುನಾಥ್, ರಾಜು, ಶಾರದಾ, ಮೋಹನ್ ಹಾಗೂ ಇತರರು ತಿಳಿಸಿದ್ದಾರೆ.