ಸುAಟಿಕೊಪ್ಪ, ಏ. ೨೭: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದಿಸೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಘಟಿಸಲು ಆಸ್ಪದ ಕೊಡುವುದಿಲ್ಲ ಎಂಬ ಸಂದೇಶಕ್ಕೆ ಇಂಬು ನೀಡುವಂತೆ ಕೇಂದ್ರ ಕೈಗಾರಿಕ ರಕ್ಷಣಾ ಪಡೆ, ಇಂಡೋ ಟಿಬೆಟಿಯನ್ ಗಡಿ ರಕ್ಷಣಾಪಡೆ ಪೊಲೀಸ್, ಸುಂಟಿಕೊಪ್ಪ ಪೊಲೀಸರು ಜಂಟಿಯಾಗಿ ಪಥಸಂಚಲನವನ್ನು ನಡೆಸಿ ಗಮನಸೆಳೆದರು.
ಕುಶಾಲನಗರ ವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ವೃತ್ತನಿರೀಕ್ಷಕರಾದ ಬಿ.ಜಿ.ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಅವರೊಂದಿಗೆ ಸಿಐಎಫ್‌ನ ಅಧಿಕಾರಿ ಚೌಹಣ್ ೧೦೦ ಕ್ಕೂ ಹೆಚ್ಚು ಮಂದಿಯ ಶಸ್ತಾçರ್ಜಿತ ತುಕಡಿ, ಇಂಡೋಟಿಬೆಟಿಯನ್ ಗಡಿ ರಕ್ಷಣಾಪಡೆ ಪೊಲೀಸ್ ತುಕಡಿ ತಂಡದವರು ಸುಂಟಿಕೊಪ್ಪದ ಮುಖ್ಯ ರಸ್ತೆಯಲ್ಲಿ ಸಾಗಿ ಮಧುರಮ್ಮ ಬಡಾವಣೆಗಾಗಿ, ಪಂಪ್‌ಹೌಸ್, ಗುಡ್ಡಪ್ಪ ರೈ ಬಡಾವಣೆ, ೧ನೇ ವಿಭಾಗಕ್ಕಾಗಿ ಸಾಗಿ ಮರಳಿ ಪೊಲೀಸ್ ಠಾಣೆ ಸೇರಿದರು.
ಕೊಡಗಿನ ಜನತೆ ಶಾಂತಿ ಪ್ರಿಯರು ಮಾತ್ರವಲ್ಲದೆ ಚುನಾವಣಾ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವವರಾಗಿದ್ದಾರೆ ಆದರೂ ಸಮಾಜದಲ್ಲಿ ಕೆಲವು ಕೀಡಿಗೇಡಿಗಳು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಎಚ್ಚರಿಕೆ ಹಾಗೂ ಶಾಂತಿ ಪ್ರಿಯ ಜನರಿಗೆ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಇಂದಿನ ಪಥಸಂಚಲನವನ್ನು ನಡೆಸಲಾಯಿತು.