ನಾಪೋಕ್ಲು, ಏ. ೨೭: ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೧ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕಟ್ ನಮ್ಮೆಯ ಬಾಳೆಯಡ ಕಪ್ ಕ್ರಿಕೆಟ್ನ ಐದನೆಯ ದಿನದ ಪಂದ್ಯಾಟದಲ್ಲಿ ಕಾಂಡೆರ ತಂಡ ಮೊದಲ ಶತಕವನ್ನು ದಾಖಲಿಸಿದೆ. ಉಳಿದಂತೆ ಚೀಯಕಪೂವಂಡ, ನಂದೇಟಿರ, ಅಲ್ಲಂಗಡ, ಕೇಲೇಟಿರ, ಕಂಬೀರAಡ, ಮಾಚೆಟ್ಟಿರ, ಕಾಂಡೆರ ಕುಟುಂಬ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಚೀಯಕಪೂವಂಡ ಮತ್ತು ಕೇಟೋಳಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಚೀಯಕಪೂವಂಡ ತಂಡ ೨ ವಿಕೆಟ್ ನಷ್ಟಕ್ಕೆ ೬೭ ರನ್ಗಳ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಕೇಟೋಳಿರ ತಂಡ ೪ ವಿಕೆಟ್ ಕಳೆದುಕೊಂಡು ೩೪ ರನ್ ಗಳಿಸಿ ಸೋಲನುಭವಿಸಿತು. ಮಿನ್ನಂಡ ಮತ್ತು ನಂದೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಿನ್ನಂಡ ತಂಡ ೫ ವಿಕೆಟ್ ನಷ್ಟಕ್ಕೆ ೨೯ ರನ್ಗಳ ಸವಾಲೊಡ್ಡಿತು. ಇದನ್ನು ಬೆನ್ನೆಟ್ಟಿದ ನಂದೇಟಿರ ತಂಡ ೩ ವಿಕೆಟ್ ಕಳೆದುಕೊಂಡು ೩೩ ರನ್ಗಳಿಸಿ ಗೆಲುವು ಸಾಧಿಸಿತು. ಕನ್ನಿಗಂಡ ಮತ್ತು ಕೊಂಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕನ್ನಿಕಂಡ ತಂಡವು ೩ ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕೊಂಡಿರ ತಂಡವು ೧ ವಿಕೆಟ್ ನಷ್ಟಕ್ಕೆ ೮೦ ರನ್ಗಳಿಸಿ ಮುನ್ನಡೆ ಸಾಧಿಸಿತು.
ಅಲ್ಲಂಗಡ ಮತ್ತು ಮುದ್ದಿಯಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಅಲ್ಲಂಗಡ ತಂಡ ೩ ವಿಕೆಟ್ ನಷ್ಟಕ್ಕೆ ೬೮ ರನ್ಗಳಿಸಿತು. ಅದನ್ನು ಹಿಂಬಾಲಿಸಿದ ಮುದ್ದಿಯಡ ತಂಡ ೭ ವಿಕೆಟ್ ನಷ್ಟಕ್ಕೆ ೫೦ ರನ್ಗಳಿಸಿ ಸೋಲನುಭವಿಸಿತು. ಕೇಲೇಟಿರ ಮತ್ತು ಅಜ್ಜಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೇಲೇಟಿರ ತಂಡವು ೪ ವಿಕೆಟ್ ನಷ್ಟಕ್ಕೆ ೩೧ ರನ್ಗಳಿಸಿದರೆ, ಅಜ್ಜಮಾಡ ತಂಡವು ೫ ವಿಕೆಟ್ ನಷ್ಟಕ್ಕೆ ೨೮ ರನ್ಗಳಿಸಿ ಸೋಲನುಭವಿಸಿತು. ಬೊಟ್ಟೋಳಂಡ ಮತ್ತು ಕಂಬೀರAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೊಟ್ಟೋಳಂಡ ತಂಡವು ೭ ವಿಕೆಟ್ ನಷ್ಟಕ್ಕೆ ೪೨ ರನ್ ದಾಖಲಿಸಿದರೆ, ಇದನ್ನು ಬೆನ್ನಟ್ಟಿದ ಕಂಬೀರAಡ ತಂಡವು ೨ ವಿಕೆಟ್ ನಷ್ಟಕ್ಕೆ ೪೩ ರನ್ ಗಳಿಸಿ ಗೆಲುವು ಸಾಧಿಸಿತು.
ಅಜ್ಜಿನಂಡ ಮತ್ತು ಮಾಚೆಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಜ್ಜಿನಂಡ ತಂಡ ೮ ವಿಕೆಟ್ ನಷ್ಟಕ್ಕೆ ೫೯ ರನ್ ಗಳಿಸಿದರೆ, ಇದನ್ನು ಬೆನ್ನಟ್ಟಿದ ಮಾಚೆಟ್ಟಿರ ತಂಡವು ೧ ವಿಕೆಟ್ ನಷ್ಟಕ್ಕೆ ೬೪ ರನ್ಗಳಿಸಿ ಗೆಲುವು ಸಾಧಿಸಿತು. ಕೊಂಡಿರ ಮತ್ತು ಅಲ್ಲಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಂಡಿರ ತಂಡ ೯ ವಿಕೆಟ್ ನಷ್ಟಕ್ಕೆ ೩೮ ರನ್ ಗಳಿಸಿದರೆ, ಅದನ್ನು ಹಿಂಬಾಲಿಸಿದ ಅಲ್ಲಂಗಡ ತಂಡ ೨ ವಿಕೆಟ್ ನಷ್ಟಕ್ಕೆ ೪೦ ರನ್ ಗಳಿಸಿ ಗೆಲುವು ಸಾಧಿಸಿತು. ಕಾಂಡೆರ ಮತ್ತು ಮಲ್ಲಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಕಾಂಡೆರ ತಂಡವು ೧ ವಿಕೆಟ್ ನಷ್ಟಕ್ಕೆ ೧೦೭ ರನ್ಗಳಿಸಿದರೆ, ಅದನ್ನು ಬೆನ್ನೆಟ್ಟಿದ ಮಲ್ಲಂಡ ತಂಡ ೩ ವಿಕೆಟ್ ನಷ್ಟಕ್ಕೆ ೫೩ ರನ್ಗಳಿಸಿ ಸೋಲೊಪ್ಪಿಕೊಂಡಿತು.