ಕಣಿವೆ, ಏ. ೨೭: ಬಸವ ಜಯಂತಿ ಅಂಗವಾಗಿ ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಡೈಮಂಡ್ ಡ್ಯಾಶರ್ಸ್ ತಂಡ ಮೊದಲ ಬಹುಮಾನ ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.

ತಂಡದ ಆಟಗಾರರಾದ ರಕ್ಷಿತ್ ಮತ್ತು ಲೋಹಿತ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ಪಡೆದರು. ನೈಟ್ ರೈಡರ್ಸ್ ತಂಡ ಎರಡನೇ ಸ್ಥಾನ ಹಾಗೂ ಟೀಂ ರಾಕರ್ಸ್ ತಂಡ ಮೂರನೇ ಬಹುಮಾನ ಮತ್ತು ಆಕರ್ಷಕ ಟ್ರೋಫಿ ಪಡೆದುಕೊಂಡಿತು.

ಸೆಮಿಫೈನಲ್ ಹಾಗೂ ಅಂತಿಮ ಹಣಾಹಣಿಯಲ್ಲಿ ಆಡಿದ ಎಲ್ಲಾ ಆಟಗಾರರಿಗೆ ಪ್ರತ್ಯೇಕವಾದ ಟ್ರೋಫಿ ನೀಡಲಾಯಿತು. ಈ ಸಂದರ್ಭ ನೈಟ್ ರೈಡರ್ಸ್ ತಂಡದ ಮಾಲೀಕ ಕಾಫಿ ಮಹೇಶ್, ಟೀಂ ರಾಕರ್ಸ್ ಮಾಲೀಕ ಡಿ.ಎಂ. ಆನಂದ್, ಪುನೀತ್, ಪಿಡಿಓ ಲೋಕೇಶ್, ಶೈಜನ್ ಪೀಟರ್, ಕಾಫಿ ಅರುಣ್, ಸೋಮು, ಪಾಣತ್ತಲೆ ಗಿರೀಶ್, ರಾಜೇಶ್, ಅಭಿ, ಸುಜಿತ್, ಜಂಪ್ ಸ್ಮಾಶ್ ಕ್ರೀಡಾಂಗಣದ ಮಾಲೀಕ ಶರತ್ ಮೊದಲಾದವರಿದ್ದರು.