ಕಣಿವೆ, ಏ. ೨೭: ಕುಶಾಲನಗರದ ಬೈಚನಹಳ್ಳಿಯ ಕಾವೇರಿ ನದಿಯಂಚಿನಲ್ಲಿ ಚರಂಡಿ ಬ್ಲಾಕ್ ಆಗಿದ್ದು ಕಲುಷಿತ ತ್ಯಾಜ್ಯ ನೀರು ದಾರಿಯಲ್ಲೇ ಹರಿದು ಕಾವೇರಿ ನದಿಗೆ ಸೇರುತ್ತಿದೆ. ಕುಶಾಲನಗರ ಪುರಸಭಾ ವ್ಯಾಪ್ತಿಯ ನಾಗರಿಕರಿಗೆ ಕುಡಿ ಯುವ ನೀರು ಪೂರೈಸುವ ಜಲಾಗಾರದ ಬಳಿ ಈ ತ್ಯಾಜ್ಯ ನೀರು ಹರಿಯುತ್ತಿದ್ದು, ಕೂಡಲೇ ಪುರಸಭಾ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಬ್ಲಾಕ್ ಆಗಿರುವ ಚರಂಡಿಯನ್ನು ಸ್ವಚ್ಛಗೊಳಿಸಿ ಸೂಕ್ತ ಇಂಗು ಗುಂಡಿಯನ್ನು ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.