ಸೋಮವಾರಪೇಟೆ, ಏ. ೨೭: ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು. ಜ್ಞಾನಮಾರ್ಗವನ್ನು ವಿಶ್ಲೇಷಿಸುವ ಅದ್ವೆöÊತ ಸಿದ್ಧಾಂತದ ಮೂಲಕ ಸಾಮಾನ್ಯ ಜನರ ಜೀವನ ಸಾರ್ಥಕತೆ, ಮುಕ್ತಿಗಾಗಿ ಹಿಂದೂ ಧರ್ಮವನ್ನು ಸರಿಯಾದ ಅರ್ಥದಲ್ಲಿ ಪ್ರತಿಪಾದಿಸಿದ ಶ್ರೀ ಶಂಕರಾಚಾರ್ಯರು ಮನುಕುಲದ ಒಳಿತಿಗೆ ಸಲ್ಲಿಸಿದ ಸೇವೆ ಸ್ಮರಣೀಯ ಎಂದು ಶ್ರೀ ಸೋಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಅಭಿಪ್ರಾಯಿಸಿದರು. ದಿನದ ಅಂಗವಾಗಿ ದೇವಾಲಯದಲ್ಲಿ ಅಭಿಷೇಕ, ಅರ್ಚನೆಯೊಂದಿಗೆ, ಪ್ರಧಾನ ಅರ್ಚಕ ಚಿತ್ರ ಕುಮಾರ್ ಭಟ್ ನೇತೃತ್ವ ದಲ್ಲಿ ಗುರು ಪೂಜಾ ವಿಧಿ ವಿಧಾನಗಳು ನಡೆಯಿತು. ದೇವಾಲಯದ ಕಾರ್ಯದರ್ಶಿ ಎಸ್.ಡಿ. ವಿಜೇತ್, ಸತೀಶ್, ಸುದರ್ಶನ್ ಕೌಶಿಕ್, ಎಸ್.ಎನ್. ಸೋಮಶೇಖರ್, ಮೋಹನ್ ರಾಮ್, ದಿನೇಶ್ ಹಾಲೇರಿ, ರವಿಶಂಕರ್, ಕುಮಾರ್, ರವಿ, ಸೂರ್ಯ, ಕೃಷ್ಣಪ್ಪ, ದೇವಿ ಬಳಗದ ಅಧ್ಯಕ್ಷೆ ವಿಮಲ ರಾಜ್ ಗೋಪಾಲ್, ಜಿ. ಆನಂದ್, ಮೂಡಲಗಿರಿ ಮತ್ತಿತರರು ಇದ್ದರು.